ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶ್ರೀವಿಜಯ ಕಲಾನಿಕೇತನದ ವತಿಯಿಂದ ಫೆ. 12ರಿಂದ 14ರವರೆಗೆ ನೃತ್ಯ ನಿರಂತರ ಎಂಬ ಯುವ ಕಲಾವಿದರ ಶಾಸ್ತ್ರೀಯ ನೃತ್ಯ ಮಾಲಿಕೆ ಕಾರ್ಯಕ್ರಮವನ್ನು ಸಂಜೆ 6ಗಂಟೆಗೆ ರಾಜೇಂದ್ರನಗರದ ಪವಿತ್ರಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಫೆ.12ರ ಶುಕ್ರವಾರ ಕೆ. ರೂಪ ಕಥಕ್ ನೃತ್ಯ ಮತ್ತು ವಿದ್ವಾನ್ ಸಾಗರ್ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಫೆ.13ರ ಶನಿವಾರ ಕರಿಷ್ಮಾ ಅಹೂಜಾ ಅವರಿಂದ ಒಡಿಸ್ಸಿ ನೃತ್ಯ ಮತ್ತು ಜಯಶ್ರೀ ಶಂಕರನ್ ಅವರಿಂದ ಮೋಹಿನಿಯಾಟ್ಟಂ ನೃತ್ಯ ಪ್ರದರ್ಶಿತವಾಗಲಿದೆ.
ಫೆ.14ರ ಭಾನುವಾರ ಹೇಮಾ ಎ ಗೌತಮ್ ಅವರಿಂದ ಕೂಚುಪುಡಿ ನೃತ್ಯ ಹಾಗೂ ಕುಮಾರಿ ದಿವ್ಯ ಪ್ರಭಾತ್ ಅವರಿಂದ ಭರತನಾಟ್ಯ ಕಾರ್ಯಕ್ರಮಗಳು ಮೂಡಿಬರಲಿವೆ.
ಭಾರತೀಯ ಸಾಂಸ್ಕೃತಿಕ ನಿರ್ಧೇಶನಾಲಯದ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಎಚ್ಚರಿಕೆ ದಿನಪತ್ರಿಕೆಯ ಸಂಪಾದಕ ವೈ.ಕೆ ಸೂರ್ಯನಾರಾಯಣ್, ಚಿತ್ರ ಕಲಾವಿದೆ ಕಾತ್ಯಾಯಿನಿ, ಲೇಖಕಿ ಶ್ರೀರಂಜಿನಿ ದತ್ತಾತ್ರಿ ಪಾಲ್ಗೊಳ್ಳಲಿದ್ದಾರೆ.
ಶ್ರೀವಿಜಯ ಅಧ್ಯಕ್ಷ ಡಾ. ಕೆ.ಆರ್. ಶ್ರೀಧರ್ ಮೂರು ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಾ. ಕೆ.ಎಸ್.ಪವಿತ್ರಾ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post