ಬೈಂದೂರು: ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್-ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಮಧು ಬಂಗಾರಪ್ಪ ಇಂದು ಬೈಂದೂರು ವ್ಯಾಪ್ತಿಯಲ್ಲಿ ನಿರಂತರ ಪ್ರಚಾರ ನಡೆಸಿದರು.
ಬೈಂದೂರ್ ವಿಧಾನಸಭಾ ಕ್ಷೇತ್ರದ ವಣಸೆ ಬ್ಲಾಕ್’ನ ತಲ್ಲೂರ್ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಜೆಡಿಎಸ್ ಮುಖಂಡರೊಂದಿಗೆ ಬಿರುಸಿನ ಪ್ರಚಾರ ಕೈಗೊಂಡ ಅವರು, ಬೈಂದೂರು ವಿಧಾನಸಭಾ ಕ್ಷೇತ್ರದ ಅಂಪಾರು ಗ್ರಾಮದಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷದ ಮುಖಂಡರ ಕಾರ್ಯಕರ್ತರ ಚುನಾಯಿತ ಪ್ರತಿನಿಧಿಗಳ ಸಭೆ ನಡೆಸಿದರು.
ಆನಂತರ ಬೈಂದೂರ್ ವಿಧಾನಸಭಾ ಕ್ಷೇತ್ರದ, ಶಂಕರ ನಾರಾಯಣ, ಜಾನ್ಸಾಲೆ, ಸಿದ್ದಾಪುರ, ಉಳ್ಳೂರು 74 ಹಾಗೂ ಮುಂತಾದೆಡೆ ಕಾಂಗ್ರೆಸ್ ಜೆಡಿಎಸ್ ಮುಖಂಡರೊಂದಿಗೆ ಬಿರುಸಿನ ಪ್ರಚಾರ ಕೈಗೊಂಡರು.
ಅಲ್ಲದೇ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕರಾದ ಗೋಪಾಲ ಪೂಜಾರಿಯವರೊಂದಿಗೆ ಹೊಸಂಗಡಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಮುಖಂಡರ ಕಾರ್ಯಕರ್ತರ ಹಾಗೂ ಮತದಾರರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಇನ್ನು ಮಧು ಬಂಗಾರಪ್ಪ ಅವರು ಇಂದು ಸಂಜೆ ಮಾಜಿ ಶಾಸಕರು ಗೋಪಾಲ ಪೂಜಾರಿ ಇವರೊಂದಿಗೆ ಎಡೆಮೊಗೆ, ಆದ್ರಿ, ಗಂಗೊಳ್ಳಿ ಮತ್ತು ಕಟ್ಟು ಬೆಲ್ಟು ಪಂಚಾಯಿತಿಗಳಲ್ಲಿ ಮುಖಂಡರ ಕಾರ್ಯಕರ್ತರು ಹಾಗೂ ಚುನಾಯಿತ ಪ್ರತಿನಿಧಿಗಳ ಸಭೆ ನಡೆಸಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತ ನೀಡುವುದರ ಮೂಲಕ ಅಭೂತಪೂರ್ವ ಗೆಲುವಿಗೆ ಸಹಕರಿಸಬೇಕಾಗಿ ಮನವಿ ಮಾಡಿದರು.
Discussion about this post