ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತುಂಗಾ ನದಿಗೆ #TungaRiver ತ್ಯಾಜ್ಯ ಹಾಕುವುದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ನಗರದ ಹೊಳೆ ಬಸ್‍ಸ್ಟಾಪ್ ಬಳಿ ಇರುವ ಸೇತುವೆಯ ಮೇಲೆ ಗ್ಯಾಲರಿಯನ್ನು ಹಾಕುವ ಕೆಲಸ ಭರದಿಂದ ಸಾಗಿದೆ.
ಕೆಲವರು ತಮ್ಮ ಮನೆಗಳಲ್ಲಿ ಕಾರ್ಯಕ್ರಮಗಳನ್ನು ಮುಗಿಸಿ ಉಳಿದ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಕವರ್‍ನಲ್ಲಿ ತುಂಬಿ ಹೊಳೆಗೆ ಹಾಕುತ್ತಿದ್ದರು. ಅಕ್ಕಿ, ಕುಂಕುಮ, ಬಟ್ಟೆ, ಬಾಳೆಹಣ್ಣು, ಹೀಗೆ ವಿವಿಧ ರೀತಿಯ ಪದಾರ್ಥಗಳನ್ನೆಲ್ಲ ನೀರಿಗೆ ಹಾಕಬೇಕು ಎಂಬ ನಂಬಿಕೆಯಿಂದ ಚಾನಲ್ ಇಲ್ಲ ಹೊಳೆಗೂ ಬೀಸಾಕುತ್ತಿದ್ದರು.

Also read: ಯುಪಿಎ ಅವಧಿಯಲ್ಲಿ ಎಷ್ಟು ಎನ್ ಡಿಆರ್ ಎಫ್ ಹಣ ಬಂದಿದೆ, ರಾಜ್ಯ ಸರ್ಕಾರ ಬಹಿರಂಗಪಡಿಸಲಿ
ಇದಷ್ಟಲ್ಲದೇ ಮನೆಯಲ್ಲಿ ಉಳಿದ ಮಾಂಸ, ಮಾಂಸದಂಗಡಿಗಳಲ್ಲಿ ಉಳಿದ ತ್ಯಾಜ್ಯವು ಕೂಡ ಹೊಳೆಗೆ ಹಾಕಲಾಗುತ್ತಿತ್ತು. ಜಾಲರಿಯನ್ನು ಹಾಕುವುದರಿಂದ ಸ್ವಲ್ಪ ಮಟ್ಟಿಗಾದರೂ ಇದನ್ನು ಕಡಿಮೆ ಮಾಡಬಹುದಾಗಿದೆ.

ಅಷ್ಟೇ ಅಲ್ಲ ಮಳೆಗಾಲ ಮುಂತಾದ ಸಂದರ್ಭದಲ್ಲಿ ನದಿ ತುಂಬಿದಾಗ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಉದಾಹರಣೆಗಳು ಇದ್ದವು. ಈಗ ಗ್ಯಾಲರಿ ಹಾಕುವುದರಿಂದ ಇದನ್ನು ತಡೆದಂತೆಯಾಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post