ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸಕ್ರೆಬೈಲಿನಲ್ಲಿ ಆನೆಯೊಂದು ಸಾವಿಗೀಡಾದ ಒಂದು ವಾರದ ಅವಧಿಯಲ್ಲೇ ಇಂದು ಮತ್ತೊಂದು ಆಕರ್ಷಕ ಆನೆ ‘ರಂಗ’ ಸಾವನ್ನಪ್ಪಿದೆ.

ಕಳೆದ ರಾತ್ರಿ ಕಾಡಾನೆ ಏಕಾಏಕಿ ದಾಳಿ ನಡೆಸಿದಾಗ ಸರಪಳಿಯಲ್ಲಿ ಬಂಧಿಯಾಗಿದ್ದ ರಂಗ ಅಸಹಾಯಕನಾಗಿ ದಂತ ತಿವಿತಕ್ಕೆ ಬಲಿಯಾಗಿದ್ದಾನೆ.
ಸಕ್ರೆಬೈಲು ಕ್ಯಾಂಪ್’ನಲ್ಲಿ ಹುಟ್ಟಿದ ರಂಗ ಗೀತಾ ಎಂಬ ಆನೆಯ ಮರಿ. 35 ವರ್ಷ ಈ ರಂಗ ಇಡಿಯ ಕ್ಯಾಂಪ್’ನಲ್ಲೇ ಅತ್ಯಂತ ಆಕರ್ಷಕ ಆನೆ ಎಂಬ ಖ್ಯಾತಿಗೆ ಪಾತ್ರವಾಗಿತ್ತು.

ಆನೆಯ ನಿಧನದ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















