ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಲ್ಕೋಳ ವಿದ್ಯುತ್ ಉಪಕೇಂದ್ರದ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ವೆಂಕಟೇಶನಗರ, ಅಚ್ಯುತ್‌ರಾವ್ ಲೇಔಟ್, ಚೆನ್ನಪ್ಪ ಲೇಔಟ್, ಜಯನಗರ, ಎ.ಎನ್.ಕೆ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅ.23ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಶಿವಮೊಗ್ಗ ಮೆಸ್ಕಾಂನ ಕಾ ಮತ್ತು ಪಾ ನಗರ ಉಪವಿಭಾಗ-1 ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಮಂಡ್ಲಿ ವಿವಿ ಕೇಂದ್ರಕ್ಕೆ ಸಂಪರ್ಕ ಹೊಂದಿರುವ ದುರ್ಗಿಗುಡಿ 11 ಕೆವಿ ಮಾರ್ಗವನ್ನು ಭೂಗತ ಕೇಬಲ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಸ್ಪನ್ ಪೋಲ್ ಅಳವಡಿಕೆ ಕಾಮಗಾರಿ ಹಮ್ಮಿಕೊಂಡಿದ್ದು, ಗಾರ್ಡ್‌ನ್ ಏರಿಯಾ 1 ರಿಂದ 3 ಅಡ್ಡರಸ್ತೆಗಳು, ಸವಾರ್‌ಲೇನ್ ರಸ್ತೆ, ಎಲ್ ಎಲ್ ಆರ್ ರಸ್ತೆ, ಗೋಪಿವೃತ್ತ, ಜೆಪಿಎನ್ ರಸ್ತೆ ಹಾಗೂ ದುರ್ಗಿಗುಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅ.23ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಶಿವಮೊಗ್ಗ ಮೆಸ್ಕಾಂನ ನಗರ ಉಪವಿಭಾಗ-2 ರ ಸಹಾಯಕ ಇಂಜಿನಿಯರ್ ತಿಳಿಸಿದ್ದಾರೆ.
ಅ.25, 26ರಂದು ವಿದ್ಯುತ್ ವ್ಯತ್ಯಯ:
ಶಿವಬಸವನಗರ, ಇಂದಿರಾಗಾಂಧಿ ಬಡಾವಣೆ, ವೀರಭದ್ರೇಶ್ವರ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಸ 11 ಕೆ.ವಿ. ಮಾರ್ಗದ ಕೆಲಸವಿರುವುದರಿಂದ ಅ.25 ಮತ್ತು 26 ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಶಿವಮೊಗ್ಗ ಮೆಸ್ಕಾಂನ ಕಾ ಮತ್ತು ಪಾ ನಗರ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post