ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೇಡಿಯೋ #Radio ಶಿವಮೊಗ್ಗ #Shivamogga ಸಮುದಾಯ ಬಾನುಲಿ ಕೇಂದ್ರ #FMRadio ಹಾಗೂ ಪರಿಸರ ಅಧ್ಯಯನ ಕೇಂದ್ರವು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗಾಗಿ ಕನ್ನಡದ ರಸಪ್ರಶ್ನೆ #Quiz ಕಾರ್ಯಕ್ರಮವನ್ನು ಏರ್ಪಡಿಸಿದ್ದು, ವಿಜೇತರಿಗೆ ನಗದು ಬಹುಮಾನಗಳಿರುತ್ತವೆ.
ಕನ್ನಡ ರಾಜ್ಯೋತ್ಸವದ #KannadaRajyotsava ಅಂಗವಾಗಿ ನಡೆಯಲಿರುವ ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕನ್ನಡ ನಾಡು, ನುಡಿ, ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಶಿವಮೊಗ್ಗ ಜಿಲ್ಲೆ ಹೀಗೆ ಸಂಪೂರ್ಣವಾಗಿ ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಪ್ರಶ್ನೆಗಳು ಇರುತ್ತವೆ. ವಿದ್ಯಾರ್ಥಿ ವಿಭಾಗದಲ್ಲಿ 8, 9, 10, 11 ಹಾಗೂ 12ನೆಯ ತರಗತಿಯ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿರುತ್ತದೆ. ಸಾರ್ವಜನಿಕರ ವಿಭಾಗದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಭಾಗವಹಿಸಬಹುದು.

ಪ್ರತಿ ತಂಡಕ್ಕೆ 20 ರೂ. ಪ್ರವೇಶ ಶುಲ್ಕವಿರುತ್ತದೆ. ನ.19ರಂದು ಸಂಜೆ 4:30ಕ್ಕೆ ಪೂರ್ವಭಾವಿ ಸುತ್ತು ನಡೆಯಲಿದೆ. ಶಿವಮೊಗ್ಗದ ಬಾಲರಾಜ್ ಅರಸ್ತೆಯಲ್ಲಿನ ಜಿಲ್ಲಾ ನ್ಯಾಯಾಲಯದ ಎದುರಿಗಿನ ಕುವೆಂಪು ಶತಮಾನೋತ್ಸವ ಮಹಾವಿದ್ಯಾಲಯದಲ್ಲಿ ಇದು ಆಯೋಜನೆಗೊಂಡಿದೆ. ನ.26ರಂದು ಅಂತಿಮ ಸುತ್ತು ರೇಡಿಯೋ ಶಿವಮೊಗ್ಗದ ಬಾನುಲಿ ಕೇಂದ್ರದಲ್ಲಿ ನಡೆಯಲಿದ್ದು, ಇದು ಬಾನುಲಿಯಲ್ಲಿ ನೇರ ಪ್ರಸಾರವಿರುತ್ತದೆ.

ರೇಡಿಯೋ ಶಿವಮೊಗ್ಗ ಆಪ್’ನ್ನು ಗೂಗಲ್ ಪ್ಲೇ ಸ್ಟೋರ್, ಆಪಲ್ ಸ್ಟೋರ್’ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಿಲಯದ ನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post