ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈಲ್ವೆ ನಿಲ್ದಾಣದ #RailwayStation ಬಳಿಯಲ್ಲಿ ಸಂಜೆ ಪತ್ತೆಯಾಗಿರುವ ಅನುಮಾನಾಸ್ಪದ ಎರಡು ಬಾಕ್ಸ್’ಗಳ #Box ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಿಂದ ಆಗಮಿಸಿರುವ ಬಾಂಬ್ ನಿಷ್ಕ್ರಿಯದಳ ಕಾರ್ಯಾಚರಣೆ ನಡೆಸುತ್ತಿದೆ.
ರೈಲ್ವೆ ನಿಲ್ದಾಣದ ಸಮೀಪ ಎರಡು ಅನುಮಾನಾಸ್ಪದವಾಗಿ ಗೋಣಿ ಚೀಲದಿಂದ ಸುತ್ತಿರುವ ಕಬ್ಬಿಣದ ಬಾಕ್ಸ್ ಪತ್ತೆಯಾಗಿದೆ.
ಈ ಬಾಕ್ಸ್’ಗಳ ಮೇಲೆ ಮೇಡ್ ಇನ್ ಬಾಂಗ್ಲಾದೇಶ, ಫುಡ್ ಗ್ರೇನ್ಸ್ ಎಂದು ಬರೆಯಲಾಗಿದೆ. ಸರ್ವಮಂಗಳ ಎಂಬ ಹೆಸರು ಬರೆದು ಸ್ಟಾçಂಡ್ ರೋಡ್, ಕೋಲ್ಕತ್ತ ಎಂಬ ವಿಳಾಸವು ಇದೆ.
ಈ ಬಾಕ್ಸ್’ಗಳಲ್ಲಿ ಸ್ಪೋಟ ಇರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಆಗಮಿಸಿದ್ದು ಕಾರ್ಯಾಚರಣೆ ಆರಂಭಿಸಿದೆ. ಆದರೆ, ಧೋ ಎಂದು ಸುರಿಯುತ್ತಿರುವ ಮಳೆ ಕಾರ್ಯಾಚರಣೆ ಅಡ್ಡಿಯಾಗಿ ಪರಿಣಮಿಸಿದೆ.
ಮಳೆ ಜೋರಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪರಿಶೀಲನಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















