ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ತಾಲೂಕು ಮರಾಠ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ 394ನೇ ಜಯಂತೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿದ ಆರ್.ಪ್ರಸನ್ನಕುಮಾರ್ ಮಾತನಾಡಿ, ಶಿಕಾರಿಪುರ ತಾಲ್ಲೂಕಿನಲ್ಲಿ ಹಾಗು ಶಿವಮೊಗ್ಗದಲ್ಲಿ ಮರಾಠ ಸಮಾಜದ ಆಸ್ತಿ ಬಹಳಷ್ಟು ಇದ್ದು ಅವರ ಕೊಡುಗೆ ಅಪಾರ ಅದನ್ನು ಸದುಪಯೋಗ ಪಡೆದುಕೊಳ್ಳುವ ಕೆಲಸ ಸಮಾಜದವರು ಮಾಡಬೇಕು ಎಂದರು.
ಸಮಾಜದ ಅದ್ಯಕ್ಷರಾದ ಗುರುರಾಜ್ ಜಗಥಾಪ್ ರವರು ಉತ್ತಮ ಸಂಘಟನಾಕರರು ಅವರ ನೇತೃತ್ವದಲ್ಲಿ ಸಮಾಜ ಉನ್ನತಿಯಾಗಲಿ ಹಾಗು ಇಂದು ಬೇಗೂರು ಗ್ರಾಮ ಪಂಚಾಯಿತಿ ಅಧಕ್ಷರಾಗಿ ನಿಮ್ಮ ಸಮಾಜದ ಲಕ್ಷ್ಮಣ್ ರಾವ್ ರವರು ಆಯ್ಕೆಯಾಗಿದ್ದು ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದರು.
ಈ ಸಂಧರ್ಭದಲ್ಲಿ ಸಮಾಜದ ಅದ್ಯಕ್ಷರಾದ ಗುರುರಾಜ್ ಜಗಥಾಪ ರವರು, ತಾಲ್ಲೂಕು ಪಂಚಾಯಿತಿ ಅದ್ಯಕ್ಷರಾದ ಸುರೇಶ್ ನಾಯ್ಕ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಮತಾಸಾಲಿ, ಶಾಂತವೀರಪ್ಪಗೌಡರು, ಲಕ್ಷ್ಮಣ್, ಪುರಸಭಾ ಸದಸ್ಯರಾದ ಉಳ್ಳಿ ದರ್ಶನ್, ಶಿವೂನಾಯ್ಕ್, ಹಾಗು ಮರಾಠ ಸಮಾಜದ ಬಂಧುಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post