ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಾರ್ನಾಮಿ ಬೈಲಿನಲ್ಲಿ ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ದೊಡ್ಡಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ನಡೆದ 24 ಗಂಟೆಯ ಒಳಗೆ ದೊಡ್ಡಪೇಟೆ ಪಿಐ ವಸಂತ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಐವರನ್ನ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.
ವಾಸಿಂ ಆಲಿಯಾಸ್ ಕಾಲಾ ವಾಸಿಂ, ವಾಸಿಂ ಅಕ್ರಂ, ನಿಹಾಲ್, ಜುನೇದ್ ಬೇಗ್ ಹಾಗೂ ಉಮರ್ ಬಂಧಿತ ಆರೋಪಿಗಳಾಗಿದ್ದು, ಹುಡಗಿಯ ವಿಚಾರದಲ್ಲಿ ಅಭಿಲಾಶ್ ಮತ್ತು ರಾಕೇಶ್ ಎಂಬ ಇಬ್ಬರು ಯುವಕರ ಮೇಲೆ ಈ ಐವರು ಆರೋಪಿಗಳು ಮಾರ್ನಾಮಿಬೈಲಿನಲ್ಲಿ ಫೆ.16ರಂದು ರಾತ್ರಿ 8:30ರ ಸಮಯದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು ಎಂದು ಹೇಳಲಾಗಿದೆ.
ಈ ಐವರು ಆರೋಪಿಗಳಲ್ಲಿ ನಿಹಾಲ್ ಮತ್ತು ಜುನೇದ್ ಇಬ್ಬರೂ ಸಹ ಬಾಲಾಪರಾಧಿಗಳಾಗಿದ್ದು, ವಾಸಿಂ ಕಳವು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post