ಶಿವಮೊಗ್ಗ: ಜಿಲ್ಲೆಯಲ್ಲಿ ಖಡಕ್ ಅಧಿಕಾರಿ ಎಂದೇ ಖ್ಯಾತವಾಗಿ, ಜನಾನುರಾಗಿಯಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ಐಪಿಎಸ್ ಅಧಿಕಾರಿಣಿ ಡಾ.ಎಂ. ಅಶ್ವಿನಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಎರಡೂವರೆ ವರ್ಷಗಳ ಕಾಲ ಜಿಲ್ಲೆಯ ಎಸ್’ಪಿ ಆಗಿ ಸೇವೆ ಸಲ್ಲಿಸಿದ ಅಭಿನವ್ ಖರೆ, ತಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಿ ಶಾಂತಿ ಕಡದಡ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಹೆಸರಾಗಿದ್ದರು. ಸದ್ಯ ಅವರನ್ನು ಬೆಂಗಳೂರು ಗೃಹರಕ್ಷಕ ದಳದ ಕಮಾಂಡೆಂಟ್ ಆಗಿ ವರ್ಗವಣೆ ಮಾಡಲಾಗಿದೆ.
ಇನ್ನು, 2015ರ ಬ್ಯಾಚ್ ಐಪಿಎಸ್ ಅಧಿಕಾರಿಣಿಯಾದ ಡಾ.ಎಂ. ಅಶ್ವಿನಿ ಅವರನ್ನು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ. ಬೆಂಗಳೂರು ಕ್ರೈಂ ಬ್ಯಾಂಚ್ ನಲ್ಲಿ ಅಸಿಸ್ಟೆಂಟ್ ಇನ್’ಸ್ಪೆಕ್ಟರ್ ಜೆನರಲ್ ಅಫ್ ಪೊಲೀಸ್ ಆಗಿ ಸೇವೆ ಸಲ್ಲಿಸಿರುವ ಅಶ್ವಿನಿ, ಪೊಲೀಸ್ ಕೇಂದ್ರ ಕಚೇರಿಯಲ್ಲೂ ಸಹ ಸೇವೆ ಸಲ್ಲಿಸಿ ಆಡಳಿತಾತ್ಮಕ ವಿಚಾರಗಳಲ್ಲಿ ಅಪಾರ ಅನುಭವ ಹೊಂದಿರುವ ಅಧಿಕಾರಿಣಿಯಾಗಿದ್ದಾರೆ.
Discussion about this post