ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿ ಎಂದು ಜಿಲ್ಲಾ ಬಿಜೆಪಿ ಮುಖಂಡ ಬಿ.ಕೆ. ಶ್ರೀನಾಥ್ ಕರೆ ನೀಡಿದ್ದಾರೆ.
ನಗರ ಬಿಜೆಪಿ ವಾರ್ಡ್ ನಂ.29 ರ ವಾರ್ಡಿನ ಪ್ರಮುಖರು, ಅಧ್ಯಕ್ಷರು, ಕಾರ್ಯದರ್ಶಿ, ಪ್ರಭಾರಿಗಳು, ಪೇಜ್ ಪ್ರಮುಖರು, ಬಿಎಲ್’ಟುಗಳು ಮತ್ತು ನಗರ ಸಮಿತಿ ಪದಾಧಿಕಾರಿಗಳನ್ನು ಒಳಗೊಂಡ ಸಭೆಯು ಮಾರಿಕಾಂಬ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ನಾವೆಲ್ಲರೂ ಪಕ್ಷದ ಕಾರ್ಯಕರ್ತರಾಗಿ ತಮ್ಮ ತಮ್ಮ ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದಲ್ಲಿ ಯಾವುದೇ ಚುನಾವಣೆ ಗೆಲ್ಲುವ ಸಾಧ್ಯತೆ ಇದೆ. ಆದರೆ ಯಾವುದೇ ಕಾರಣಕ್ಕೂ ಮೈಮರೆಯದಂತೆ ಸದಾ ಜಾಗೃತಿಯಿಂದ ಕೆಲಸ ಮಾಡುವಂತೆ ಕರೆ ನೀಡಿದರು. ಅಲ್ಲದೆ ಪ್ರಧಾನಿ ನರೇಂದ್ರಮೋದಿಯವರ ಸರ್ಕಾರ ಕೆಳಹಂತದಿಂದ ವಯಸ್ಸಾದ ಜನರವರೆಗೂ ವಿವಿಧ ಸೌಲಭ್ಯಗಳನ್ನು ನೀಡಿದ್ದಾರೆ ಎಂದರು.
ಭ್ರಷ್ಟಾಚಾರ ರಹಿತ ಆಡಳಿತ, ದೇಶಪ್ರೇಮ ಮುಂತಾದ ವಿಷಯಗಳ ಮೂಲಕ ಮತ್ತೆ ಪ್ರಧಾನಿಯಾಗಲು ಇಂದಿನಿಂದ ಚುನಾವಣೆಗೆ ಸಜ್ಜಾಗಬೇಕು ಎಂದರು.
ಪಾಲಿಕೆ ಸದಸ್ಯೆ ಸುನೀತ ಅಣ್ಣಪ್ಪ, ಮಾಧ್ಯಮ ವಿಭಾಗದ ಕೆ.ವಿ. ಅಣ್ಣಪ್ಪ, ವಾರ್ಡ್ ಅಧ್ಯಕ್ಷ ರಘುನಾಥ್, ಕಾರ್ಯದರ್ಶಿ ಶ್ರೀನಿವಾಸ್, ನಗರ ಸಮಿತಿಯ ಎಚ್.ಎನ್. ಮಂಜುನಾಥ್, ಶ್ರೀನಿವಾಸ್, ಮೀನಾಕ್ಷಿ ಇದ್ದರು.
Discussion about this post