ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ತಾಲೂಕಿನ ಹಾಡೋನಹಳ್ಳಿ ಗ್ರಾಮದ ವಿದ್ಯಾರ್ಥಿ ಓರ್ವ ಮನೆಯಲ್ಲಿ ಜೋಕಾಲಿ ಆಡುತ್ತಿರುವಾಗ ಜೋಕಾಲಿಗೆ ಕಟ್ಟಿಕೊಳ್ಳಲು ಬಳಸಿದಂತಹ ಸೀರೆ ಕುತ್ತಿಗೆ ಸುತ್ತಿಕೊಂಡು ಆಕಸ್ಮಿಕವಾಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕಿಶೋರ್(13) ಎಂಬಾತನೇ ಮೃತ ದುರ್ದೈವಿ. ಈತ ಮೂಲತಃ ಹೊನ್ನಾಳಿ ತಾಲೂಕು ದೊಡ್ಡೇರಿ ಗ್ರಾಮದ ನಾಗರಾಜಪ್ಪ ಎಂಬುವರ ಮಗನಾಗಿದ್ದು, ಕಳೆದ ಎರಡು ವರ್ಷಗಳಿಂದ ಹಾಡೋನಹಳ್ಳಿಯ ತನ್ನ ಸಹೋದರ ಸಂಬಂಧಿಯ ಮನೆಯಲ್ಲಿ ವ್ಯಾಸಂಗಕ್ಕಾಗಿ ಬಂದಿದ್ದ.
ಗ್ರಾಮದ ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಪ್ರಸಕ್ತ ಎಂಟನೆಯ ತರಗತಿ ವ್ಯಾಸಂಗ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಶಿವಮೊಗ್ಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















