ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಾರಣಾಂತಿಕ ಕೊರೋನ ವೈರಸ್ ಸೋಂಕು ನಿಯಂತ್ರಿಸುವಲ್ಲಿ ಹಾಗೂ ರಾಜ್ಯದ ಜನರ ಹಿತ-ಸುಖ ಕಾಪಾಡುವ ನಿಟ್ಟಿನಲ್ಲಿ ಆಡಳಿತಾರೂಢ ಸರ್ಕಾರವು ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡಿರುವುದು ಜನಜನಿತವಾಗಿದೆ. ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ ಮುಜುಗರ ಉಂಟು ಮಾಡುವಂತೆ ವಾಟ್ಸ್ಯಾಪ್ ಗುಂಪಿನಲ್ಲಿ ಸಂದೇಶ ರವಾನಿಸಿದ ಸೊರಬ ತಾಲೂಕು ಆನವಟ್ಟಿಯ ಶಿಕ್ಷಕರಿಬ್ಬರನ್ನು ಅಮಾನತ್ತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ ಆದೇಶ ಹೊರಡಿಸಿದ್ದಾರೆ.
ಕೊರೋನ ವೈರಸ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಶಾಲಾ ಮಕ್ಕಳಿಗಷ್ಟೇ ಅಲ್ಲದೆ ಅಲ್ಲಿನ ಶಿಕ್ಷಕರಿಗೂ ರಜೆ ನೀಡಿ ಮನೆಯಲ್ಲಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯವಾಗಿರುವ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುವಂತೆ ಆದೇಶ ಹೊರಡಿಸಲಾಗಿತ್ತು.
ಇಲಾಖೆಯ ಅಧಿಕಾರಿಗಳ ಈ ಆದೇಶವನ್ನು ಧಿಕ್ಕರಿಸಿ ವಹಿಸಿದ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸದೆ ಕೆಲವು ಸಾಮಾಜಿಕ ಜಾಲತಾಣಗಳ ಮೂಲಕ ಅಸಂಬದ್ಧ ವಿಷಯವನ್ನು ರವಾಸುತ್ತಿದ್ದ ಸೊರಬ ತಾಲೂಕು ತಿಮ್ಮಾಪುರ ಸಹಿಪ್ರಾ ಶಾಲೆಯ ಸಹಶಿಕ್ಷಕ ಢಾಕ್ಯಾನಾಯ್ಕ ಮತ್ತು ಈ ಸಂದೇಶವನ್ನು ಪ್ರೇರೇಪಿಸುವಂತೆ ಸಂದೇಶ ರವಾನಿಸಿದ ವಾಟ್ಸ್ಯಾಪ್ ಗುಂಪಿನ ಅಡ್ಮಿನ್ ಹಾಗೂ ಸಿ.ಆರ್.ಪಿ. ರಾಜು, ಆನವಟ್ಟಿ ಅವರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.
Get in Touch With Us info@kalpa.news Whatsapp: 9481252093






Discussion about this post