ದಿಂಡುದ ಮಹಾಲಕ್ಷ್ಮೀ ಕ್ರಿಯೇಷನ್ಸ್ ಲಾಂಛನದಲ್ಲಿ ಶ್ರೀಮತಿ ಹಂಸ ಶ್ರೀಕಾಂತ್ ನಿರ್ಮಾಣದ ‘ಭೂತಃ ಕಾಲ’ (ಕಳೆದುಹೋದ ಕಾಲದ ಸುತ್ತ) ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಚಿತ್ರದ ಚಿತ್ರೀಕರಣವು ಜನಸಾಮಾನ್ಯರು ಕಂಡ ಕೇಳರಿಯದ ಭಯಾನಕ ಸ್ಥಳವೊಂದರಲ್ಲಿ ನಡೆದಿದ್ದು ಅಲ್ಲಿ ನಡೆದ ನೈಜ ಮತ್ತು ವಿಚಿತ್ರ ಘಟನೆಯ ಸುದ್ದಿಯನ್ನು ಸಧ್ಯದಲ್ಲೆ ಹೇಳಲಿದ್ದಾರೆ.
ಶಿವಮೊಗ್ಗದ ವಿನೋಬ ನಗರದ ಸಚಿನ್ ಬಾಡಾ ನಿರ್ದೇಶಿಸಿರುವ ಈ ಚಿತ್ರಕ್ಕೆ ಸಿಜೋ ಕೆ ಜೋಸ್ ಛಾಯಾಗ್ರಹಣ, ಪ್ರಮೋದ್ ಸೂರ್ಯ ಸಂಗೀತ, ಮುತ್ತುರಾಜ್ ಸಂಕಲನವಿದೆ.
ಕುಮಾರ್ ಆರಾಧ್ಯ, ಕೊಳಾಲಿ ಪ್ರಸಾದ್ ಶೆಟ್ಟಿ, ನವೀನ್ ಕುಮಾರ್, ಚೇತನ ಮಹೇಶ್, ನಿರ್ವಾಹಕರಾಗಿರುವ ಈ ಚಿತ್ರದಲ್ಲಿ ಆನಂದ್ ಗಣೇಶ್, ರಕ್ಷಿತ, ವಿಶೇಷ ಪಾತ್ರದಲ್ಲಿ ಅನನ್ಯಭಟ್, ಟೆನ್ನಿಸ್ ಕೃಷ್ಣ, ಶ್ರೀನಿವಾಸ ಪ್ರಭು, ಅರುಣಾ ಬಾಲರಾಜ್, ಕಿರಣ್ ಕುಮಾರ್, ತರಂಗ ವಿಶ್ವ, ಬೇಬಿ ವೈಭವಿ, ಹರೀಶ್, ರಮೇಶ್, ಮುಂತಾದವರಿದ್ದಾರೆ.
Discussion about this post