ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವಿನೋಬನಗರದ ಚಾಚಾ ನೆಹರೂ ಪಾರ್ಕ್ ಪಕ್ಕದಲ್ಲಿರುವ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಶ್ರೀ ಸ್ವಾಮಿಯ ಸ್ಥಿರ ಮೂರ್ತಿ ಪ್ರತಿಷ್ಠಾಪನೆಯ 27ನೇ ವರ್ಧಂತ್ಯೋತ್ಸವ ಕಾರ್ಯಕ್ರಮವು ಮಾ.21ರ ನಾಳೆ ನಡೆಯಲಿದೆ.
ಇಂದು ಸಂಜೆ 6ಗಂಟೆಯಿಂದ ಗಣಪತಿ ಪೂಜೆ, ಪುಣ್ಯಾಹವಾಚನ, ದೇವನಾಂದಿ, ಋತ್ವಿಗ್ ವರ್ಣನೆ, ಉತ್ಸವಮೂರ್ತಿ ಪ್ರಕಾರ ದರ್ಶನ, ಬ್ರಹ್ಮಕಲಶ ಸ್ಥಾಪನೆ, ಆದಿವಾಸ ಹೋಮ, ಪ್ರಕಾರ ದಿಗ್ಬಲಿ, ಮಂಗಳಾರತಿ ನಡೆಯಲಿದೆ.
21ರ ಬೆಳಿಗ್ಗೆ 8:30ರಿಂದ ನವಗ್ರಹ ಪೂರ್ವಕ ಆಧಿವಾಸ ಹೋಮ, ಕಲಾತತ್ವ ಹೋಮ, ಪ್ರಕಾರ ಪಲ್ಲಕ್ಕಿ ಉತ್ಸವ, ಬ್ರಹ್ಮ ಕುಂಭಾಭಿಷೇಕ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗವಿರುತ್ತದೆ. ಸಂಜೆ ೬:೩೦ಕ್ಕೆ ರಾಘವೇಂದ್ರ ಜನ್ನು ಮತ್ತು ಭಜನಾ ಮಂಡಳಿಯವರಿಂದ ಸತ್ಸಂಗ ಮತ್ತು ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯದ ಚೈತನ್ಯ ಸಮಿತಿಯ ಅಧ್ಯಕ್ಷ ಕೆ.ಸಿ.ಬಿ. ಪಿಳ್ಳೈ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಹೆಚ್. ಚಂದ್ರಪ್ಪ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post