ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಶೇಕಡ 100ರಷ್ಟು ಫಲಿತಾಂಶ ಬಂದಿದ್ದು, ಪರೀಕ್ಷೆ ಬರೆದ 420 ಮಕ್ಕಳು ಸಹ ಉತ್ತೀರ್ಣರಾಗಿದ್ದು, ಅದರಲ್ಲಿ 254 ಮಕ್ಕಳು ಡಿಸ್ಟಿಂಕ್ಷನ್ ಪಡೆದಿದ್ದಾರೆ.160 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಆರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ,
ಶೇಕಡ ನೂರಕ್ಕೆ ನೂರು ಅಂಕ ಪಡೆದ ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರದ 3, ರಾಸಾಯನಶಾಸ್ತ್ರದ ನಾಲ್ಕು, ಗಣಿತದ 8, ಜೀವಶಾಸ್ತ್ರದ 3, ಕಂಪ್ಯೂಟರ್ ವಿಜ್ಞಾನದ 14 ಹಾಗೂ ಕನ್ನಡ ಎರಡು, ಸಂಸ್ಕೃತದಲ್ಲಿ 12 ವಿದ್ಯಾರ್ಥಿಗಳು ಈ ಫಲಿತಾಂಶ ಪಡೆದಿದ್ದಾರೆ.
ಈ ವಿಜ್ಞಾನ ಕಾಲೇಜಿನ ಟಾಪರ್ ಆಗಿರುವ ಎಂ ಎಸ್ ಸ್ಪೂರ್ತಿ ಅವರು 590 ಅಂಕ ಗಳಿಸಿ ಶಿವಮೊಗ್ಗ ಜಿಲ್ಲೆಯ ಪ್ರಥಮ ಸ್ಥಾನವನ್ನು ಪಡೆದಿದ್ದು, ರಾಜ್ಯದಲ್ಲಿ ಏಳನೇ ರಾಂಕ್ ಗಳಿಸಿದ್ದಾರೆ.
ಅಂತೆಯೇ 588 ಅಂಕ ಪಡೆದಿರುವ ಶಶಾಂಕ್ ಜೋಯ್ಸ್ ರಾಜ್ಯದಲ್ಲಿ 9ನೇ ಸ್ಥಾನ ಪಡೆದಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಎರಡನೇ ಸ್ಥಾನವನ್ನು ಗಳಿಸಿದ್ದಾರೆ.
Also read: ಆತ್ಮವಿಶ್ವಾಸದಿಂದ ಕಟ್ಟಿದ ಬಿಜೆಪಿ ಹೆಮ್ಮರವಾಗಿ ಬೆಳೆದಿದೆ: ಮಾಜಿ ಡಿಸಿಎಂ ಈಶ್ವರಪ್ಪ
ಅಂತೆಯೇ ಧ್ರುವ ಅವರು 585, ಪೂರ್ವಿಕಾ 585, ಕೃತಿಕಾ 584, ನಮೃತ 584, ಮೋನಿಷಾ 581, ನಮ್ರತಾ ವಿಟಿ 581, ವಿಜೇತ ಬಿ ವಿ 581, ಪ್ರಾರ್ಥನಾ ಎಂ 580, ವಿಸ್ಮಯ ಸೇತುರ್ 580 ಅಂಕಗಳಿಸಿದ್ದಾರೆ.
ಅತಿ ಹೆಚ್ಚು ಅಂಕ ಪಡೆದ ಹಾಗೂ ಕಾಲೇಜಿಗೆ ಶೇಕಡ ನೂರರ ಫಲಿತಾಂಶ ತಂದುಕೊಟ್ಟ ಮಕ್ಕಳಿಗೆ ಹಾಗೂ ಅಧ್ಯಾಪಕ ವೃಂದಕ್ಕೆ, ಪ್ರಾಂಶುಪಾಲರಿಗೆ ಆದಿಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post