ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ಶಾಸ್ತ್ರೀಯ ಸಂಗೀತದ ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸುವ ಸಲುವಾಗಿ ಮೇ 29ರಂದು ನಿರಂತರ 13 ಗಂಟೆಗಳ “ಯುವ ಸಂಗೀತೋತ್ಸವ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಎಸ್ ಪಿ ಎಂ ರಸ್ತೆಯಲ್ಲಿರುವ ಶ್ರೀ ಶಾರದಾ ಸಂಗೀತ ವಿದ್ಯಾಲಯದ ವತಿಯಿಂದ ನಗರದ ಶ್ರೀ ಶೃಂಗೇರಿ ಶಂಕರ ಮಠ ಇವರ ಸಹಯೋಗದಲ್ಲಿ ಶ್ರೀ ಅಭಿನವ ವಿದ್ಯಾ ತೀರ್ಥ ಸಭಾ ಭವನದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅಂದರೆ ಬೆಳಗ್ಗೆ ಸರಿಯಾಗಿ 5:59ಕ್ಕೆ ಆರಂಭವಾಗಿ ಸಂಜೆ 6:49ರವರೆಗೆ ಸತತವಾಗಿ 13 ಗಂಟೆಗಳ ಕಾಲ ನಿರಂತರ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಯುವ ಗಾಯಕರುಗಳಾದ ಎಂ. ರಜತ್ ದೀಕ್ಷಿತ್ , ಹೆಚ್.ಎ. ಕಾರ್ತಿಕ್ , ಹೆಚ್. ಸಿ. ಆಕಾಶ್, ಎನ್. ಧನಲಕ್ಷ್ಮೀ, ಹೆಚ್.ಸಿ. ವಿಶಾಖ, ಸ್ಫೂರ್ತಿ-ಸ್ಕೃತಿ, ಸಂಜನ ಎಸ್. ಕುಮಾರ್, ಸಿ. ಆರ್. ಸುಷ್ಮಾ ಎಂ. ಅನುಶ್ರೀ, ಸೌಜನ್ಯ ಬಿ.ಆರ್, ನಾಗಶ್ರೀ ಯು.ಜಿ. – ಭಾರ್ಗವಿ ವಿ.ಎಂ. | ಇವರಿಂದ ಹಾಡುಗಾರಿಕೆ ಹಾಗೂ ಕು. ವೈಷ್ಣವಿ, ನಿಹಾರಿಕಾ ರಿಂದ ವೀಣಾ ವಾದನ, ಶ್ರೀವತ್ಸ ಕೆ.ಎಸ್. ರವರಿಂದ ವೇಣು ವಾದನ,
ಮತ್ತು ಕಾರ್ತಿಕ್, ಸೂರ್ಯ ರವರಿಂದ ಪಿಟೀಲು ವಾದನ ಕಚೇರಿಗಳು ನಡೆಯಲಿದೆ.
ಈ ಎಲ್ಲಾ ಯುವ ಕಲಾವಿದರಿಗೆ ಪಕ್ಕವಾದ್ಯ ಸಹಕಾರವನ್ನು ಪಿಟೀಲು ವಾದನದಲ್ಲಿ ವಿದ್ವಾಂಸರುಗಳಾದ – ಮಧುಮುರಳಿ, ಮತ್ತೂರು, ಕಾರ್ತಿಕೇಯ, ವಿವೇಕ್ ಕೃಷ್ಣ, ಕು. ಧನಶ್ರೀ ಶಬರಾಯ ಹಾಗೂ ಮೃದಂಗ ಸಹಕಾರವನ್ನು ವಿದ್ವಾಂಸರುಗಳಾದ – ಅರವಿಂದ ಹೊಳ್ಳ, ರಾಜೀವ ಮತ್ತೂರು, ಕೇಶವ ಹೊಸಹಳ್ಳಿ. ಶ್ರೇಯಸ್ ಬಿ.ಆರ್, ನಿಖಿಲ್ ಕುಮಾರ್ ಎಸ್., ಶ್ರೀನಿಧಿ ಬಿ.ಜಿ., ಅಪ್ರಮೇಯ ಇವರುಗಳು ನೀಡಲಿದ್ದಾರೆ.
Also read: ಭಾರತೀಯ ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆ: 8 ಭಯೋತ್ಪಾದಕ ಸಹಚರರ ಬಂಧನ
ಇಂತಹ ವಿನೂತನ ಕಾರ್ಯಕ್ರಮಕ್ಕೆ ತಾವುಗಳು ಬಂದು ಸಂಗೀತದ ಸಿಹಿಯನ್ನು ಸವಿದು ಯುವಕಲಾವಿದರನ್ನು ಪ್ರೋತ್ಸಾಹಿಸ ಬೇಕೆಂದು ಶ್ರೀ ಶಾರದಾ ಸಂಗೀತ ವಿದ್ಯಾಲಯದ ವತಿಯಿಂದ ವಿನಂತಿಸಲಾಗಿದೆ. ವಿವರಗಳಿಗೆ ಸಂಪರ್ಕಿಸಿ : 98444 44820 / 94486 65936.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post