ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ #Shri Prasanna Ganapathi Temple ಅ.3ರಿಂದ 18ರವರೆಗೆ ಶರನ್ನವರಾತ್ರಿ #Sharannavarathri ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಂಕರ ನಾರಾಯಣ ಭಟ್ಟ ತಿಳಿಸಿದ್ದಾರೆ.
ಶ್ರೀ ಪ್ರಸನ್ನ ಗಣಪತಿಯ ಅನುಗ್ರಹದಿಂದ ಸುಮಾರು 28 ವರ್ಷಗಳಿಂದ ಶರನ್ನವರಾತ್ರಿ ಉತ್ಸವವನ್ನು 15 ದಿನಗಳ ಕಾಲ ಅತ್ಯಂತ ವೈಭವೋಪೇತವಾಗಿ ಆಚರಿಸಿಕೊಂಡು ಬಂದಿದ್ದು, ಕೀರ್ತಿಶೇಶ ಅ.ಪ.ರಾಮಭಟ್ಟರ ಮಾರ್ಗದರ್ಶನದಂತೆ ಪ್ರತಿ ವರ್ಷ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿಯ ಬೇರೆ ಬೇರೆ ಅವತಾರಗಳಲ್ಲಿ ಅಲಂಕರಿಸಲ್ಪಟ್ಟ ದೇವತೆಯ ಮೂರ್ತಿಯನ್ನು ಕೊಲ್ಕತ್ತಾದ ಮಧುಸೂದನ್ ಪಾಲ್ ಎಂಬ ಪ್ರಸಿದ್ಧ ಶಿಲ್ಪಿಯಿಂದ ಧ್ಯಾನ ಶ್ಲೋಕದಲ್ಲಿ ಹೇಳಿದಂತೆ ವಿಗ್ರಹವು ಮಾಡಲ್ಪಡುತ್ತದೆ. ಈ ಬಾರಿ ಶ್ರೀ ಸರಸ್ವತಿ ಶಾರದಾ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸುತ್ತೇವೆ. ಶ್ರೀದೇವಿಯ ಮುಂಭಾಗದಲ್ಲಿ ಪ್ರತಿನಿತ್ಯ ಚಂಡಿಕಾಯಾಗ, ಪೂಜೆ ಅರ್ಚನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಕ ನಡೆಯಲಿದೆ.

ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು 15 ದಿನಗಳ ಕಾಲ ಪ್ರತಿನಿತ್ಯ ಬೆಳಗ್ಗೆ ಚಂಡಿಕಾಯಾಗ 12:30 ಕ್ಕೆ ಮಹಾಪೂರ್ಣಾಹುತಿ ನಂತರ ಪ್ರಸಾದ ವಿನಿಯೋಗ ಸಂಜೆ ಲಲಿತಾ ಸಹಸ್ರ ಮಾರ್ಚನೆ ಅಷ್ಟಾವಧಾನ ಸೇವೆ ಸಂಜೆ ಸಂಜೆ ಭಜನಾ ಪರಿಷತ್ (ರಿ) ಇವರ ಸಹಯೋಗದೊಂದಿಗೆ ಸಂಜೆ 5 ರಿಂದ 6ವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯುವುದು, 6 ರಿಂದ ಸಹಚೇತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಪ್ರತಿದಿನ ಭರತನಾಟ್ಯ ಕಾರ್ಯಕ್ರಮ. 6-30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಜರುಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















Discussion about this post