ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಫ್ರೀಡಂಪಾರ್ಕ್‌ನಲ್ಲಿ ಫೆ.28ರಂದು ಏರ್ಪಡಿಸಲಾಗಿರುವ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಮ್ಮೊಲುಮೆ ಅಭಿಮಾನದ ಅಭಿನಂದನೆಯ ಭಾವಾಬಿನಂದಾನಾ ಕಾರ್ಯಕ್ರಮಕ್ಕೆ 21 ಸಮಾಜಗಳು ಸ್ವಪ್ರೇರಣೆಯಿಂದ ಬೆಂಬಲ ಸೂಚಿಸಿದೆ.
ಇಂದು ನಗರದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಶಿವಗಂಗಾ ಯೋಗ ಕೇಂದ್ರ, ಮೆಡಿಕಲ್ ಶಾಪ್ ಅಸೋಶಿಯೇಷನ್, ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಜಿಲ್ಲಾ ವಕ್ಫ್ ಬೋರ್ಡ್, ಬಂಟರ (ನಾಡವರ) ಸಂಘ, ಜಿಲ್ಲಾ ಬ್ರಾಹ್ಮಣ ಸಂಘ, ಮರಾಠ ಸಂಘ, ಬಾಹುಸಾರ ಕ್ಷತ್ರಿಯ ಮಹಾಸಭಾ, ಸಾಧಿ ಚೆಟ್ಟಿ, ತಮಿಳು, ವಿವಿಧ ಸಮಾಜದ ಒಕ್ಕೂಟ, ಭೋವಿ ಸಮಾಜ, ವೀರಶೈವ ಹೀಗೆ 21 ಸಮಾಜದ ಸಂಘಟನೆಗಳು ತಮ್ಮ ಬೆಂಬಲ ವ್ಯಕ್ತಪಡಿಸಿವೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಸಮುದಾಯಗಳಿಗೆ ಹಲವು ಅನುಕೂಲ ಮಾಡಿಕೊಟ್ಟ ಬಗ್ಗೆ ಆಯಾ ಸಮಾಜದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರ ಶೈವ ಸಮಾಜದ ಪರವಾಗಿ ಎನ್.ಜೆ. ರಾಜಶೇಖರ್, ಮಹೇಶ್ವರಪ್ಪ ಮಾತನಾಡಿದರು. ಜಿಲ್ಲಾ ಬ್ರಾಹ್ಮಣ ಸಮಾಜದ ವತಿಯಿಂದ ಮಾ.ಸ.ನಂಜುಂಡ ಸ್ವಾಮಿ, ಎಸ್.ದತ್ತಾತ್ರಿ, ಬಿ.ಆರ್.ಮಧುಸೂಧನ್, ಛಾಯಾಪತಿ, ಅಚ್ಚತ್ ರಾವ್, ಎಂ. ಶಂಕರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದರು.
ಬೋವಿ ಸಂಘದ ಪರವಾಗಿ ವೀರಭದ್ರಪ್ಪ ಪೂಜಾರ್, ತಮಿಳು ಸಂಘದಿಂದ ಮಂಜುನಾಥ್, ಸಾಧುಚೆಟ್ಟಿ ಸಮಾಜದ ವಿರಾಜು, ಮೊಗವೀರ್ ಸಮಾಜದ ಜಿಲ್ಲಾಧ್ಯಕ್ಷ ಅಣ್ಣಪ್ಪ, ಕ್ರಿಶ್ಚಿನ್ ಸಮುದಾಯದ ವಿನ್ಸೆಂಟ್ ರೋಡ್ರಿಗಸ್, ಮಡಿವಾಳ ಸಮಾಜದ ಸುರೇಶ್, ಚೌಡಪ್ಪ ಹಾಗೂ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post