ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಏರ್ಪಡಿಸಲಾಗಿರುವ ರಂಗ ದಸರಾ ಭಾಗವಾಗಿ, ಸೆ. 29ರಿಂದ ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪರ್ಧೆ ಆಯೋಜಿಸಲಾಗಿದೆ.
ಸೆ. 29 ಮತ್ತು 30 ರಂದು ಕುವೆಂಪು ರಂಗ ಮಂದಿರ ಹಾಗೂ ಅ.1, 2 ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯಲಿದ್ದು, ರಾಜ್ಯದಾದ್ಯಂತದಿಂದ ಒಟ್ಟು 28 ತಂಡಗಳು ಆಗಮಿಸಲಿದೆ. ಈ ಪೈಕಿ ಸಮಯ ಹಾಗೂ ಸ್ಥಳದ ಲಭ್ಯತೆಯ ಆಧಾರದ ಮೇಲೆ 16 ನಾಟಕಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ 30,000, ದ್ವಿತೀಯ ಬಹುಮಾನ 20,000 ಹಾಗೂ ತೃತೀಯ ಬಹುಮಾನ 15,000ಗಳ ನಗದು ಪುರಸ್ಕಾರ ಜೊತೆಗೆ ಚಾಮುಂಡೇಶ್ವರಿ ಟ್ರೋಫಿ ನೀಡಲಾಗುವುದು. ಇದಲ್ಲದೇ ಶ್ರೇಷ್ಟ ನಟ, ಶ್ರೇಷ್ಟ ನಟಿ ಹಾಗೂ ಶ್ರೇಷ್ಟ ನಿರ್ದೇಶನ ವಿಭಾಗಗಳಿಗೂ ನಗದು ಪುರಸ್ಕಾರವಿದೆ.
ಹೆಸರಾಂತ ರಂಗಕರ್ಮಿ, ಪರಿಸರ ಚಿಂತಕ, ವಿಶ್ರಾಂತ ಪ್ರಾಚಾರ್ಯ ಪ್ರೊ. ಬಿ. ಎಂ. ಕುಮಾರಸ್ವಾಮಿ ನಾಟಕ ಸ್ಪರ್ಧೆಗಳನ್ನು ಉದ್ಘಾಟಿಸಲಿದ್ದು, ರಂಗಕರ್ಮಿಗಳಾದ ಬಿ. ಎಂ. ರಾಜಕುಮಾರ್, ಗಾಯತ್ರಿ, ಅಭಿರುಚಿ ತಂಡದ ಅಧ್ಯಕ್ಷರಾದ ಡಾ. ಶಿವರಾಮ ಕೃಷ್ಣನ್, ರಂಗ ದಸರಾ ಸಮಿತಿಯ ಸದಸ್ಯರಾದ ಎಸ್. ಎನ್. ಚೆನ್ನಬಸಪ್ಪ, ಪ್ರಭಾಕರ್, ರಾಹುಲ್ ಬಿದರೆ, ಆರ್. ಸಿ.ನಾಯ್ಕ,¸ ಆರ್. ಎಸ್. ಸತ್ಯನಾರಾಯಣ, ಮೀನಾ ಗೋವಿಂದರಾಜ್, ಹೆಚ್. ಮೂರ್ತಿ, ಮಧು ನಾಯ್ಕ, ಡಾ. ರೇಖಾ, ಕೆ. ಸುರೇಶ್, ಶ್ರೀಕಾಂತ್, ಅನಿಲ್ ಮೂರ್ತಿ, ಪ್ರತೀಕ್ಷಾ, ಶೋಭಾ, ವಿನೀತ್, ರೂಪಾ, ಲಕ್ಷಿ÷್ಮ, ನಾಗರಾಜ್‌ರವg ಪಾಲ್ಗೊಳ್ಳಲಿದ್ದಾರೆ. ರಂಗ ದಸರಾ ಸಮಿತಿಯ ಅಧ್ಯಕ್ಷರಾ ಶಿರೀಶ್‌ರವರು ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರದರ್ಶಿಸಲ್ಪಡುವ ನಾಟಕಗಳು:
ಸೆ. 29ರಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 4ರಿಂದ ಬೆಂಗಳೂರಿನ ಉದಯ ಕಲಾ ನಿಕೇತನ ತಂಡದಿಂದ ಬ್ಲಾಕ್ ಔಟ್, ತೆಕ್ಕಟ್ಟೆಯ ಕಲಾಶಕ್ತಿ ಕಲಾ ತಂಡದಿಂದ ಆಟಗಾರ, ಬಳ್ಳಾರಿಯ ಧಾತ್ರಿ ಸಿರಿಗೆರೆ ತಂಡದ ರಾಜೇಂದ್ರ ಕಾರಂತ್ ರಚನೆಯ ದಾವಣಗೆರೆ ಭೀಮೇಶ್ ನಿರ್ದೇಶನದ ಮುದ್ದಣ್ಣನ ಪ್ರಮೋಷನ್ ಪ್ರಸಂಗ, ನಾಟಕಗಳು ಪ್ರದರ್ಶನ ಕಾಣಲಿವೆ.
30ರಂದು ಸಂಜೆ 4.00ರಿಂದ ಶಿವಮೊಗ್ಗದ ಬೆಳಕು ತಂಡದ ಚೋರ ಚರಣದಾಸ, ಶಿಕಾರಿಪುರದ ರಂಗ ಜೀವಿಗಳು ತಂಡದ ಲ್ಯಾಂಡ್ ಟು ಭೂಲೋಕ, ದಾವಣಗೆರೆ ರಂಗ ಅನಿಕೇತನ ತಂಡದ ಪುಕ್ಕಟೆ ಸಲಹೆ ಹಾಗೂ ಕಲ್ಪ ಸಹ್ಯಾದ್ರಿ ತಂಡದ ಚೀಟಿ ಕಾಟ ನಾಟಕಗಳ ಪ್ರದರ್ಶನ ನಡೆಯಲಿದೆ.
ಅ. 01ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ ಸಂಜೆ 4.00ರಿಂದ ಬೆಂಗಳೂರಿನ ಶಾರದಾ ಕಲಾ ನಿಕೇತನ ತಂಡದ ಹೋಂ ರೂಲ್, ಸಂಜೆ 5.30ರಿಂದ ಬೆಂಗಳೂರಿನ ಪ್ರವರ ಥಿಯೇಟರ್ ತಂಡದ ಬೆಗ್ ಬಾರೋ ಅಳಿಯ, ಬೆಂಗಳೂರಿನ ರಂಗ ಪಯಣ ತಂಡದ ಬಿದ್ದೂರಿನ ಬಿಗ್ ಬೆನ್ ಹಾಗೂ ರಂಗ ಸಂಗಮ ತಂಡದ ಕೃಷ್ಣ ರಾಯಭಾರ ನಾಟಕಗಳು ಪ್ರದರ್ಶನ ಕಾಣಲಿವೆ.
ಅ. 02ರಂದು ಮಧ್ಯಾಹ್ನ 10.30ರಿಂದ ಬೆಂಗಳೂರಿನ ಜನಪದರು ಸಾಂಸ್ಕೃತಿಕ ವೇದಿಕೆ ತಂಡದ ಸಮ್ ಸಾರ, ಮೈಸೂರಿನ ರಂಗ ಬದುಕು ತಂಡದ ಮುದುಕನ ಮದುವೆ, ಮಂಗಳೂರಿನ ಅಸ್ತಿತ್ವ ತಂಡದ ಕಂಡೋನಿಯನ್ಸ್, ಉಡುಪಿಯ ಶ್ರೀ ಕೃಷ್ಣ ಕಲಾವಿದರು ತಂಡದ ಪದ್ಮಾವತಿ ಪ್ರೇಮ ಪ್ರಸಂಗ, ಹಾಗೂ ಸೃಷ್ಟಿ ಸಾಂಸ್ಕೃತಿಕ ವೇದಿಕೆ ಯಿಂದ ಹುಡುಕೋಣ ಬನ್ನಿ ನಾಟಕಗಳು ಪ್ರದರ್ಶನ ಕಾಣಲಿವೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

























