ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಯುವತಿಗೆ ಪ್ರತಿಷ್ಠಿತ ಕೊರಿಯರ್ ಸಂಸ್ಥೆಯ ಉದ್ಯೋಗಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿ 4 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.
ಮುಂಬೈನಿಂದ ಇರಾನ್‌ಗೆ ತಮ್ಮ ಹೆಸರಿನಲ್ಲಿ ಪಾರ್ಸಲ್ ಹೋಗುತ್ತಿದೆ. ಅದರಲ್ಲಿ ಡ್ರಗ್ಸ್ ಇದ್ದು, ವಿಚಾರಣೆ ನೆಪದಲ್ಲಿ ವಂಚಕರು ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Also read: ಬೆಂಗಳೂರಿಗೆ ಶಾಕ್ | ಅವೆನ್ಯೂ ರಸ್ತೆ, ಕೆಆರ್ ಮಾರ್ಕೆಟ್, ಮೆಜೆಸ್ಟಿಕ್ ಸೇರಿ 172 ಎಕರೆ ವಕ್ಫ್ ಆಸ್ತಿಯಂತೆ!
ಯುವತಿಯ ಹೆಸರಿನಲ್ಲಿ ಇರಾನ್‌ಗೆ ಪಾರ್ಸಲ್ ಹೋಗುತ್ತಿದೆ. ಆ ಬಗ್ಗೆ ಮುಂಬೈ ಸೈಬರ್ ಕ್ರೈಮ್ ಪೊಲೀಸರು ಮಾತನಾಡುತ್ತಾರೆ ಎಂದು ಕರೆ ಕನೆಕ್ಟ್ ಮಾಡಿದ್ದ. ಪೊಲೀಸರಂತೆ ಮಾತನಾಡಿದ ಮತ್ತೊಬ್ಬ ವ್ಯಕ್ತಿ, ‘ಪಾರ್ಸಲ್‌ನಲ್ಲಿ ಒಂದು ಲ್ಯಾಪ್‌ಟಾಪ್, 5 ಕ್ರೆಡಿಟ್ ಕಾರ್ಡ್, 420 ಗ್ರಾಂ ಡ್ರಗ್ಸ್ ಇದೆ. ಈ ಬಗ್ಗೆ ವಿಚಾರಣೆ ಮಾಡಬೇಕು’ ಎಂದು ಬೆದರಿಕೆ ಒಡ್ಡಿದ್ದ.

ವಂಚನೆಗೊಳಗಾದದ್ದು ಅರಿವಾಗುತ್ತಿದ್ದಂತೆ ಯುವತಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡದ್ದಾಳೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post