No Result
View All Result
SPARSH RR Nagar Launches 5 Plastic Surgery Clinics of Excellence
English Articles

SPARSH RR Nagar Launches 5 Plastic Surgery Clinics of Excellence

by kalpa News
July 4, 2026
0

Kalpa Media House  |  Bengaluru  | To mark International Plastic Surgery Day 2026, SPARSH Hospital, RR Nagar, has launched five...

Read moreDetails
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

July 2, 2026
  • Advertise With Us
  • Grievances
  • About Us
  • Contact Us
Monday, July 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಹಿಂದೂ ಹೆಸರಿನಲ್ಲಿ ಶೇ. 62ರಷ್ಟು ಲವ್ ಜಿಹಾದ್: ಪ್ರಮೋದ್ ಮುತಾಲಿಕ್

ಶಿವಮೊಗ್ಗ  | ಪತ್ರಿಕಾ ಭವನದಲ್ಲಿ ‘ಲವ್ ಜಿಹಾದ್’ ಪುಸ್ತಕ ಬಿಡುಗಡೆ

kalpa News by kalpa News
March 12, 2025
in ಶಿವಮೊಗ್ಗ
0
ಹಿಂದೂ ಹೆಸರಿನಲ್ಲಿ ಶೇ. 62ರಷ್ಟು ಲವ್ ಜಿಹಾದ್: ಪ್ರಮೋದ್ ಮುತಾಲಿಕ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ಇಸ್ಲಾಂ ತನ್ನ ಜನಸಂಖ್ಯೆ ಹೆಚ್ಚಿಸಿಕೊಳ್ಳಲು, ಹಿಂದೂಗಳ ನೈತಿಕತೆ ಕುಸಿಯಲು ಮಾತೃದೇವೋಭವ ವಾಕ್ಯವನ್ನು ವಿಕೃತಿಗೊಳಿಸಲು ವೇಶ್ಯಾವಾಟಿಕೆಗಾಗಿ, ಭಯೋತ್ಪಾದನೆಗಾಗಿ ಮಾದಕ ವಸ್ತು ಸಾಗಾಣಿಕೆಗಾಗಿ, ಹನಿಟ್ರ್ಯಾಪ್ ಗಾಗಿ ಸುಳ್ಳು ಪ್ರೀತಿ, ಮೋಸ, ಷಡ್ಯಂತ್ರ ಮಾಡಿ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಹಿಂದು ಹೆಣ್ಣುಮಕ್ಕಳಿಗೆ ಮೋಸ ಮಾಡುತ್ತಿದ್ದಾರೆ. ಈ ಮೂಲಕ ಲವ್ ಜಿಹಾದ್ #Lovejihad ಮಾಡುತ್ತಿದ್ದಾರೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ #Pramod Muthalik ಹೇಳಿದ್ದಾರೆ.

ಅವರು ಇಂದು ಪತ್ರಿಕಾ ಭವನದಲ್ಲಿ ‘ಲವ್ ಜಿಹಾದ್’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಹಿಂದೂ ಹೆಸರಿನಲ್ಲಿ ಶೇ. 62ರಷ್ಟು ಲವ್ ಜಿಹಾದ್ ಗಳು ಆಗಿದ್ದು, ಬುರ್ಖಾ ಹಾಕದೇ ಇರುವುದಕ್ಕೆ, ನಮಾಜ್ ಮಾಡದೇ ಇರುವುದಕ್ಕೆ, ಗೋಮಾಂಸ ತಿನ್ನದೇ ಇರುವುದಕ್ಕೆ ಶೇ.81ರಷ್ಟು ಕೊಲೆಗಳಾಗಿವೆ. 2022-23ರಲ್ಲಿ 153 ಬರ್ಬರ ಕೊಲೆಗಳಾಗಿದ್ದು, 436 ಲವ್ ಜಿಹಾದ್ ಕೇಸ್ ಗಳಾಗಿವೆ ಎಂದರು.
2019ರಿಂದ 21ರಲ್ಲಿ ದೇಶದಲ್ಲಿ ಮಹಿಳೆಯರ ಕೊಲೆ, ಅತ್ಯಾಚಾರ, ದೌರ್ಜನ್ಯ ಸೇರಿದಂತೆ ಒಟ್ಟು 13 ಲಕ್ಷದ 13 ಸಾವಿರ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 2,51,430 ಅಪ್ರಾಪ್ತರಿದ್ದಾರೆ ಎಂದು ಪಾರ್ಲಿಮೆಂಟ್ ನಲ್ಲಿ ಮಾಹಿತಿ ನೀಡಲಾಗಿದೆ. ಪೊಲೀಸ್ ಸ್ಟೇಷನ್ ಗಳನ್ನ ಧ್ವಂಸ ಮಾಡಿ, ಪೊಲೀಸರ ಮೇಲೆ ಹಲ್ಲೆ ಮಾಡಿದವರನ್ನು ಈ ಸರ್ಕಾರ ಕೈಬಿಟ್ಟಿದೆ. ಆದರೆ, ದೇಶಕ್ಕಾಗಿ ಹಿಂದೂ ಹೆಣ್ಣುಮಕ್ಕಳ ಮಾನ, ಪ್ರಾಣ ರಕ್ಷಣೆಗಾಗಿ ಹೋರಾಡುತ್ತಿರುವ ಪ್ರಮೋದ್ ಮುತಾಲಿಕ್ ಅವರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ದೇಶದ್ರೋಹಿ ರೀತಿ ನಡೆಸಿಕೊಳ್ಳುತ್ತಿದೆ. ಫೆ. 28ರಂದು ‘ಲವ್ ಜಿಹಾದ್’ ಪುಸ್ತಕ ಬಿಡುಗಡೆಗೆ ಬಂದ ನನ್ನನ್ನು ರಾತ್ರಿ ಹೊತ್ತೇ ಪೊಲೀಸರು ತಡೆದು ನಿಲ್ಲಿಸಿ ಬಳಿಕ ಗಡಿಪಾರು ಆದೇಶವನ್ನು ತಂದು ತೋರಿಸುತ್ತಾರೆ. ಈಗಾಗಲೇ ಈ ಪುಸ್ತಕ 5 ಜಿಲ್ಲೆಯಲ್ಲಿ ಬಿಡುಗಡೆಗೊಂಡಿದೆ. ಒಂದು ಲಕ್ಷ ಪ್ರತಿ ಮುದ್ರಣ ಕಂಡಿದೆ. ನನ್ನ ಮೇಲೆ ಜೈಲು ವಾಸ ಅನುಭವಿಸುವ ಯಾವುದೇ ಕೇಸ್ ಗಳು ಉಳಿದಿಲ್ಲ. ನಾನು ಅಪರಾಧಿಯಲ್ಲ, ಭಯೋತ್ಪಾದಕನಲ್ಲ, ಆದರೂ, ನನ್ನನ್ನು ಪೊಲೀಸರು ನಗರ ಪ್ರವೇಶಿಸದಂತೆ ತಡೆ ಹಿಡಿದು ಅನಾಗರಿಕವಾಗಿ ವರ್ತಿಸಿದ್ದಾರೆ. ಅಂಬೇಡ್ಕರ್ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದರು.

ಎರಡೇ ದಿನದಲ್ಲಿ ಹೈಕೋರ್ಟ್ ಪೊಲೀಸರ ಕ್ರಮವನ್ನು ಖಂಡಿಸಿ ಪುಸ್ತಕ ಬಿಡುಗಡೆಗೆ ಅವಕಾಶ ನೀಡಿದೆ. ಹಾಗಾಗಿ ಇಂದು ಶಿವಮೊಗ್ಗದಲ್ಲಿ ಪುಸ್ತಕ ಬಿಡುಗಡೆಗೊಳಿಸಿದ್ದೇನೆ ಎಂದರು.
ರಾಜ್ಯದ 100 ಕಡೆಗಳಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗಾಗಿ ತ್ರಿಶೂಲ ದೀಕ್ಷಾ ಸಮಾರಂಭ ಏರ್ಪಡಿಸಿ ಅವರಿಗೆ ಅರಿವು ಮತ್ತು ಧೈರ್ಯ ತುಂಬಿಸುವ ಕಾರ್ಯ ಮಾಡುತ್ತಿದ್ದೇವೆ. ಈಗಾಗಲೇ 8 ಕಡೆ ಕಾರ್ಯಕ್ರಮ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

Also read: ಕೆ.ಇ. ಕಾಂತೇಶ್ 45ನೇ ಹುಟ್ಟುಹಬ್ಬ | ಮಾ.27ರಂದು ‘ಆಶೀರ್ವಾದ’ ಕಾರ್ಯಕ್ರಮ

ಅನ್ಯ ಧರ್ಮೀಯರನ್ನು ಮದುವೆಯಾಗಿ ಎಂಬ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ನನ್ನ ಬೆಂಬಲವಿದೆ. ಅವರು ಲವ್ ಜಿಹಾದ್ ಮಾಡಿ ಸೂಟ್ ಕೇಸ್ ನಲ್ಲಿ ಹೆಣ ತುಂಬಿ ಕಳಿಸುತ್ತಾರೆ. ಆದರೆ, ಹಿಂದೂ ಧರ್ಮೀಯರು ಮದುವೆಯಾಗಿ ಅವರನ್ನು ಸಗೃಹಿಣಿಯಾಗಿ ನೋಡಿಕೊಳ್ಳುತ್ತಾರೆ ಎಂದರು.

ಸೌಜನ್ಯ ಪ್ರಕರಣ ಕುರಿತಂತೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ಸೌಜನ್ಯ ತಾಯಿ ಇರುವ ವೇದಿಕೆಯಲ್ಲೇ ನಿಂತು ಸೌಜನ್ಯ ಕೊಲೆಗಾರರು ಯಾರೇ ಆಗಿರಲಿ, ಅವರನ್ನು ದಂಡಿಸಬೇಕು ಎಂಬುದು ನನ್ನ ಇಚ್ಚೆಯಾಗಿದೆ ಎಂದರು.

ಮೈಸೂರು ಕ್ಯಾತಮಾರನಹಳ್ಳಿಯ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಈ ಸಂಬಂಧ ಕಾರ್ನರ್ ಜಾಗದಲ್ಲಿ ಮಸೀದಿ ನಿರ್ಮಿಸಬೇಕೆಂಬ ಒತ್ತಡ ಇದೆ. ಈಗಾಗಲೇ ಅಲ್ಲಿ 8 ಮಸೀದಿಗಳಿವೆ. ಈ ವಿವಾದಕ್ಕೆ ಸಂಬಂಧಿಸಿದಂತೆ ರಾಜು ಎಂಬ ಯುವಕನ ಕೊಲೆಯಾಗಿದೆ. ಬಿಜೆಪಿ ಈ ಬಗ್ಗೆ ಹೋರಾಟ ಹಮ್ಮಿಕೊಳ್ಳಬೇಕು ಎಂದರು.
ವಕೀಲೆ ಪವಿತ್ರಾ ಮಾತನಾಡಿ, ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದರು. ಮತ್ತು ಶಿವಮೊಗ್ಗದಲ್ಲೂ ಕೂಡ ನಾಲ್ಕೈದು ಪ್ರಕರಣಗಳು ಲವ್ ಜಿಹಾದ್ ಸಂಬಂಧಿಸಿದಂತೆ ನಡೆದಿದೆ. ನಾವು ಅಂತಹ ಯುವತಿಯರು ಕಂಗೆಟ್ಟು ನಮ್ಮ ಬಳಿ ಬಂದಾಗ ಅವರಿಗೆ ಸೂಕ್ತವಾದ ಸಹಾಯ ನ್ಯಾಯಾಲಯದ ಮೂಲಕ ಕೊಡಿಸಿದ್ದೇವೆ ಎಂದರು.

ಮಂಗಳೂರಿನ ಬೇಂಗ್ರೆ ಸಮೀಪ ಹಿಂದೂ ಹುಡುಗಿಯನ್ನು ಮದುವೆಯಾಗಿ ಬಚ್ಚಿಡುವ ಪ್ರಯತ್ನ ಮಾಡಲಾಗಿತ್ತು. ಅದೇ ರೀತಿ ಅನೇಕ ಕಡೆ ಹಿಂದೂ ಹುಡುಗಿಯರು ಮೋಸದ ಬೆಲೆಗೆ ಬಿದ್ದಿದ್ದನ್ನು ಗಮನಿಸಿ ಅವರನ್ನು ರಕ್ಷಿಸುವ ಕಾರ್ಯ ಮಾಡಿದ್ದೇವೆ. ಹಿಂದೂ ಹುಡುಗಿಯರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಕೂಡ ಶ್ರೀರಾಮಸೇನೆ ಮಾಡುತ್ತಾ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ರಾಜ್ಯ ದಕ್ಷಿಣ ಪ್ರಾಂತ ಲವ್ ಜಿಹಾದ್ ಪ್ರಮುಖ್ ಸುಂದರೇಶ್ ನರೇಗಲ್, ಕೆ.ಇ. ಕಾಂತೇಶ್, ವಕೀಲರಾದ ಹಾಲಪ್ಪಗೌಡ, ವಾದಿರಾಜ್, ಪವಿತ್ರಾ, ಶೋಭಾ, ಗೀತಾ, ಅಂಬಿಕಾ, ಉಷಾ ಮತ್ತಿತರರು ಇದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/02/Kumadvati-College-Shikaripura-2025-Video.mp4
http://kalpa.news/wp-content/uploads/2024/04/VID-20240426-WA0008.mp4
Tags: Kannada_NewsKannada_News_LiveKannada_News_Online ShivamoggaKannada_WebsiteKannadaNewsWebsiteLatestNewsKannadaLocalNewsLovejihadMalnadNewsNews_in_KannadaNews_Kannadapramod muthalikShimogaShivamoggaNewsಪ್ರಮೋದ್ ಮುತಾಲಿಕ್ಮಲೆನಾಡು_ಸುದ್ಧಿಲವ್ ಜಿಹಾದ್ಶಿವಮೊಗ್ಗಶಿವಮೊಗ್ಗ_ನ್ಯೂಸ್
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕೆ.ಇ. ಕಾಂತೇಶ್ 45ನೇ ಹುಟ್ಟುಹಬ್ಬ | ಮಾ.27ರಂದು ‘ಆಶೀರ್ವಾದ’ ಕಾರ್ಯಕ್ರಮ

Next Post

ಮಾ.15-18 ವಿಟಿಯು ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ‘ಸದೃಡ-2.0’

kalpa News

kalpa News

Next Post
ಮಾ.15-18 ವಿಟಿಯು ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ‘ಸದೃಡ-2.0’

ಮಾ.15-18 ವಿಟಿಯು ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ 'ಸದೃಡ-2.0'

Leave a Reply Cancel reply

Your email address will not be published. Required fields are marked *

No Result
View All Result
SPARSH RR Nagar Launches 5 Plastic Surgery Clinics of Excellence
English Articles

SPARSH RR Nagar Launches 5 Plastic Surgery Clinics of Excellence

by kalpa News
July 4, 2026
0

Kalpa Media House  |  Bengaluru  | To mark International Plastic Surgery Day 2026, SPARSH Hospital, RR Nagar, has launched five...

Read moreDetails
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

July 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL