ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಇಂದು ದೇಶಿಯ ಇವೆಂಟ್ಸ್ ವತಿಯಿಂದ ಆಯೋಜಿಸಿರುವ ಸ್ವದೇಶಿಯ ಪರಂಪರೆಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ #Swadeshimela ಆರಂಭಗೊಂಡಿತು. ಮೇಳವನ್ನು ಖ್ಯಾತ ಉದ್ಯಮಿ ಹಾಗೂ ರೋಟರಿ ಅಧ್ಯಕ್ಷ ಹರ್ಷ ಭಾಸ್ಕರ್ ಕಾಮತ್ ಅವರು ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಹರ್ಷ ಭಾಸ್ಕರ್ ಕಾಮತ್, ನಮ್ಮ ದೇಶದ ಸ್ವದೇಶಿ ವಸ್ತುಗಳು ಮತ್ತು ಗುಡಿ ಕೈಗಾರಿಕೆಗಳ ಉತ್ಪನ್ನಗಳ ಉತ್ತೇಜನ ಮೂಲಕ ಸ್ಥಳೀಯರಿಗೆ ಆರ್ಥಿಕ ಭದ್ರತೆ ಒದಗುತ್ತದೆ. ಸ್ಥಳೀಯ ಉತ್ಪನ್ನಗಳು ಬಲಿಷ್ಠವಾದಾಗಲೇ ದೇಶ ಬಲವಾಗಿ ನಿಂತು ವಿಶ್ವಗುರುವಾಗುವ ದಾರಿಯನ್ನು ಸಾಧಿಸುತ್ತದೆ ಎಂದರು.
ಈ ಮೇಳದಲ್ಲಿ ಗೋವು ಉತ್ಪನ್ನಗಳು, ಹ್ಯಾಂಡ್‍ಮೇಡ್ ಸೋಪ್‍ಗಳು, ನೈಸರ್ಗಿಕ ಆಹಾರ ಸಾಮಗ್ರಿಗಳು, ದೇಶಿಯ ಹಸ್ತಕಲೆ, ಬಟ್ಟೆಯ ಗಣಿಕೆ, ಹ್ಯಾಂಡ್ಮೇಡ್ ಜ್ಯುವೆಲರಿ, ಅಲಂಕರಣ ವಸ್ತುಗಳು, ಸೊಲಾರ್ ಉತ್ಪನ್ನಗಳು, ಟೂರ್ಸ್ ಮತ್ತು ಟ್ರಾವೆಲ್ಸ್ ಸೇವೆಗಳವರೆಗೆ ಅನೇಕ ವಿಭಾಗಗಳ ದೇಶಿಯ ಉತ್ಪನ್ನಗಳು ಪ್ರದರ್ಶನಕ್ಕಿದ್ದು ಜನರಲ್ಲಿ ಕುತೂಹಲ ಹುಟ್ಟಿಸಿವೆ.
ಉದ್ಘಾಟನಾ ವೇದಿಕೆಯಲ್ಲಿ ಕಾರ್ಯಕ್ರಮದ ಆಯೋಜಕರಾದ ಜಯವರ್ಧನ್, ದಿಲೀಪ್ ಕುಮಾರ್, ಅರವಿಂದ್, ಹಾಗೂ ರೋಟರಿ ಕ್ಲಬ್ಬಿನ ಪ್ರಮುಖರಾದ ಮೇನಕ್, ಜಗದೀಶ್, ಪವಿತ್ರ ಕಾಮತ್ ಉಪಸ್ಥಿತರಿದ್ದರು.
ಶಿವಮೊಗ್ಗದ ಬಂಟರ ಭವನ, ಗೋಳಾಳ ಗೌಡ ಬಡಾವಣೆಯಲ್ಲಿ ನಡೆಯುತ್ತಿರುವ ಈ ಮೇಳ ಡಿಸೆಂಬರ್ 14ರ ವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶದೊಂದಿಗೆ ತೆರೆದಿದೆ.
ನಗರದ ಜನತೆ ಉತ್ಪನ್ನಗಳನ್ನು ಬೆಂಬಲಿಸಿ, ಸ್ಥಳೀಯರ ಆರ್ಥಿಕತೆಯನ್ನು ಬಲಪಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಯೋಜಕರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















