ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹೊರವಲಯದಲ್ಲಿ ದೇವಕಾತಿಕೊಪ್ಪದ ಸಮೀಪದ ಕೆಐಡಿಬಿ ಲೇ-ಔಟ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಕ್ಷುಲಕ ಕಾರಣಕ್ಕೆ ಜಗಳವಾಗಿದ್ದು, ಇಬ್ಬರು ಯುವಕರು ಲಾರಿ ಡ್ರೈವರ್ ಸುಧಾಕರ ಎಂಬಾತನ ತಲೆಗೆ ಬ್ಯಾಟ್ ನಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.
ಘಟನೆ ಹಿನ್ನೆಲೆ :
ಲಾರಿ ಚಾಲಕ ದೇವಕಾತಿಕೊಪ್ಪದ ನಿವಾಸಿ ಸುಧಾಕರ್ ಭಾನುವಾರ ಕೆಐಡಿಬಿ ಲೇಔಟ್‌ನಲ್ಲಿ ಊರಿನ ಹುಡುಗರೊಂದಿಗೆ ಕ್ರಿಕೆಟ್ ಆಡಲು ತೆರಳಿದ್ದರು. ಈ ಸಂದರ್ಭದಲ್ಲಿ ಕ್ಷುಲಕ ವಿಚಾರಕ್ಕೆ ಗಲಾಟೆಯಾಗಿದ್ದು, ಇಬ್ಬರು ಯವಕರು ಸುಧಾಕರ್ ಮೇಲೆ ದಾಳಿ ಮಾಡಿದ್ದಾರೆ. ಒಬ್ಬ ಯುವಕ ಬ್ಯಾಟ್‌ನಿಂದ ಸುಧಾಕರ್ ತಲೆಗೆ ಹೊಡೆದಿದ್ದು, ಮತ್ತೊಬ್ಬ ಯುವಕ ಕೈಯಿಂದ ಮುಖಕ್ಕೆ ಗುದ್ದಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆಗೊಳಗಾದ ಲಾರಿ ಡ್ರೈವರ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಲಾರಿ ಡ್ರೈವರ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post