ಕಲ್ಪ ಮೀಡಿಯಾ ಹೌಸ್ | ಸೊರಬ |
ಲಕ್ಷಾಂತರ ರೂ. ಮೌಲ್ಯದ ಅಡಿಕೆ ಕದ್ದಿದ್ದ ಕಳ್ಳನನ್ನು ಬಂಧಿಸಿರುವ ಪೊಲೀಸರು ಆತನಿಂದ ಅಪಾರ ಪ್ರಮಾಣದ ಅಡಿಕೆ ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ತಾಲೂಕಿನ ಮೂಡುಗೋಡು ಗ್ರಾಮದಲ್ಲಿ ಅಡಿಕೆ ಕಳ್ಳತನವಾಗಿತ್ತು. ಈ ಕುರಿತಂತೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಕಳ್ಳನನ್ನು ಮಾಲು ಸಹಿತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯಿಂದ 4.70 ಲಕ್ಷ ರೂ., ನಗದು ಹಾಗೂ ಕಳ್ಳತನಕ್ಕೆ ಉಪಯೋಗಿಸಿದ್ದ 8 ಲಕ್ಷ ರೂ., ಮೌಲ್ಯದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಮೂಡುಗೋಡು ಗ್ರಾಮದ ಜಯಕುಮಾರ್ ಎಂಬುವವರು ತಮ್ಮ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ ಮತ್ತು ಗೇರು ಬೀಜ ಕಳ್ಳತನವಾಗಿರುವ ಕುರಿತು ಮೇ.10 ರಂದು ದೂರು ದಾಖಲಾಗಿತ್ತು.
Also read: ಸಾಮಾನ್ಯರಂತೆ ಕೋರ್ಟ್ ಹೊರಗೆ ಕುಳಿತು ಜಾಮೀನು ಪಡೆದ ಸಿಎಂ ಸಿದ್ದು, ಡಿಸಿಎಂ ಡಿಕೆಶಿ | ಯಾವ ಪ್ರಕರಣ?
ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರು ಮಾವಲಿ ಗ್ರಾಮದ ಸಮೀಪದಲ್ಲಿ ಖಚಿತ ಮಾಹಿತಿ ಮೇರೆಗೆ ಶಿಕಾರಿಪುರ ತಾಲೂಕಿನ ಜಕ್ಕನಹಳ್ಳಿ ನಿವಾಸಿ ನಂದಿಶ್ ಎಂಬಾತನನ್ನು ಬಂಧಿಸಿದ್ದು, ಪ್ರಕರಣದಲ್ಲಿ ಭಾಗಿಯಾದ ನಾಲ್ವರು ತಲೆಮರೆಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಎಎಸ್ಪಿ ಅನಿಕುಮಾರ್ ಭೂಮರೆಡ್ಡಿ, ಎಎಸ್ಪಿ ಎ.ಜಿ. ಕಾರಿಯಪ್ಪ, ಡಿವೈಎಸ್ಪಿ ಕೆ.ಇ. ಕೇಶವ ಮಾರ್ಗದರ್ಶನಲ್ಲಿ ಸೊರಬ ಸಿಪಿಐ ರಮೇಶ್ ರಾವ್, ಪಿಎಸ್’ಐ ಎಚ್.ಎನ್. ನಾಗರಾಜ್, ಎಎಸ್’ಐಗಳಾದ ಲಿಂಗರಾಜ, ಪ್ರಭಾಕರ, ಎಚ್ ಪಿಸಿಗಳಾದ ರಾಜುನಾಯ್ಕ್, ನಾಗರಾಜ, ಅಶೋಕ, ನಾಗೇಶ್, ಕಾನ್ಸ್ಟೇಬಲ್’ಗಳಾದ ಕೆ.ಎನ್. ಲೋಕೇಶ್, ರಾಘವೇಂದ್ರ, ವಿನಯ, ಮಲ್ಲೇಶ್, ವಿಶ್ವನಾಥ, ಶಶಿಧರ, ಉಮೇಶ ಪರಸಪ್ಪ, ಸುನೀಲ್, ಸಂದೀಪ್, ಲೋಕೇಶ್, ಆನವಟ್ಟಿ ಠಾಣೆಯ ಆರ್.ಸಿ. ಮಂಜುನಾಥ, ಶಿವಮೊಗ್ಗ ಸಿಡಿಆರ್ ಸೆಲ್ ನ ವಿಜಯಕುಮಾರ್, ಇಂದ್ರೇಶ್ ಅವರನ್ನು ಒಳಗೊಂಡ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post