ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯುತ್ ಕಡಿತಗೊಂಡ ಸಂದರ್ಭದಲ್ಲಿ ಕಂಬವೇರಿ ರಿಪೇರಿ ಮಾಡುವ ವೇಳೆ ಕರೆಂಟ್ ರಿವರ್ಸ್ ಆಗಿ ಶಾಕ್ ತಗುಲಿ ಲೈನ್ ಮ್ಯಾನ್ ಕೆಳಕ್ಕೆ ಬಿದ್ದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ದುರ್ದೈವಿಯನ್ನು ಪವರ್ ಮ್ಯಾನ್ ಹಾಲೇಶ್(26) ಎಂದು ಗುರುತಿಸಲಾಗಿದೆ.
ವಿನೋಬನಗರ ಇಂಡಸ್ಟ್ರಿಯಲ್ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯದ ವೇಳೆ ಕಂಬ ಹತ್ತಿ ರಿಪೇರಿ ಮಾಡಲು ಹಾಲೇಶ್ ಪ್ರಯತ್ನಿಸುತ್ತಿದ್ದರು. ಆದರೆ, ಈ ವೇಳೆ ವಿದ್ಯುತ್ ರಿವರ್ಸ್ ಆಗಿ ಕರೆಂಟ್ ಶಾಕ್ ತಗುಲಿದ್ದು, ಪರಿಣಾಮವಾಗಿ ಕಂಬದಿಂದ ಕೆಳಕ್ಕೆ ಬಿದ್ದು ಅವರು ಮೃತಪಟ್ಟಿದ್ದಾರೆ.
ಅರ್ಥಿಂಗ್ ಸರಿಯಾಗಿ ಇಲ್ಲದೇ ಇದ್ದುದೇ ಘಟನೆಗೆ ಕಾರಣ ಎಂದು ಹೇಳಲಾಗಿದ್ದರೂ, ನಿಖರ ಕಾರಣ ತಿಳಿದುಬಂದಿಲ್ಲ.
Also read: ಜಪಾನ್ ಪ್ರಧಾನಿ ಫ್ಯೂಮಿಯೋ ಕಿಶಿಡಾ ಭಾಷಣದ ವೇಳೆ ಸ್ಫೋಟ: ಓರ್ವನ ಬಂಧನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post