ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೈಕ್ ಅಡ್ಡಗಟ್ಟಿ ಸವಾರನ ಮುಖಕ್ಕೆ ಹೊಡೆದು ವ್ಯಕ್ತಿಯೊಬ್ಬ ಪರಾರಿಯಾಗಿರುವ ಘಟನೆ ಓ.ಟಿ.ರಸ್ತೆಯ ಆಜಾದ್ ನಗರ 2ನೇ ಅಡ್ಡರಸ್ತೆಯಲ್ಲಿ ನಡೆದಿದೆ.
ಶಿವಮೊಗ್ಗದಲ್ಲಿ ಕೊರಿಯರ್ ಸರ್ವಿಸ್ ಕೆಲಸ ಮಾಡುತ್ತಿರುವ ಮಂಜುನಾಥ್ (28) ಎಂಬುವವರು ಪ್ರಕರಣಕ್ಕೆ ಸಂಬಮಧಿಸಿದಂತೆ ದೂರು ದಾಖಲಿಸಿದ್ದು, ಆಜಾದ್ ನಗರದ 2ನೇ ತಿರುವಿನಲ್ಲಿ ಕೊರಿಯರ್ ಕೊಟ್ಟು ಬರುವಾಗ ಘಟನೆ ನಡೆದಿದೆ.
ಕಪ್ಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಮಂಜುನಾಥ್ ಚಲಿಸುತ್ತಿದ್ದ ಬೈಕಿಗೆ ಅಡ್ಡ ಹಾಕಿ, ಮುಖಕ್ಕೆ ಹೊಡೆದು ತಕ್ಷಣ ಅಲ್ಲಿಂದ ಓಡಿ ಹೋಗಿದ್ದಾನೆ. ಕೂಡಲೆ ಮಂಜುನಾಥ್ ತನ್ನ ಸ್ನೇಹಿತನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದಾನೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















