ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಬಹಳ ಅರ್ಥಪೂರ್ಣವಾಗಿದ್ದು, ಸರ್ವರನ್ನು ಗಮನಿಸಿ ಜನಸ್ನೇಹಿ ಮುಂಗಡಪತ್ರ ತಯಾರಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ ನಂತರದಲ್ಲಿ ಉಂಟಾದ ಆರ್ಥಿಕ ಸಂಕಷ್ಟವನ್ನು ಚೇತರಿಕೆಯತ್ತ ಕೊಂಡೊಯ್ದು ಮುನ್ನಡೆ ಸಾಧಿಸಲು ಗಮನಹರಿಸಲಾಗುತ್ತಿದ್ದು, 3 ಲಕ್ಷ 7 ಸಾವಿರ ಕೋಟಿಯ ಬಜೆಟ್ ಇದಾಗಿದೆ ಎಂದಿದ್ದಾರೆ.
ಹೋಗುತ್ತಿದೆ ಹಳೇ ಕಾಲ ಬರುತ್ತಿದೆ ಹೊಸ ಭರವಸೆ ಎಂಬ ಆಶಾದಾಯಕ ನುಡಿಯನ್ನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯ್ಯ ಅವರು, ರಾಜ್ಯದ ಎಲ್ಲಾ ವರ್ಗದ ಜನರ ನಾಡಿಮಿಡಿತಾ ಅರಿತು, ಮಾನವ ಅಭಿವೃದ್ಧಿ,ಕಾರ್ಮಿಕ ಅಭಿವೃದ್ಧಿ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಹಾಗೂ ಮಹಿಳಾ ಮತ್ತು ಶಿಕ್ಷಣಕ್ಕೆ ಆದ್ಯತೆ ಕೊಡುವ ಆಯವ್ಯಯ ರೂಪಿಸಿದ್ದಾರೆ ಎಂದು ಹೇಳಿದ್ದಾರೆ.
Also read: ಬೊಮ್ಮಾಯಿ ಬಜೆಟ್’ನಲ್ಲಿ ಶಿವಮೊಗ್ಗ ಜಿಲ್ಲೆಗೆ ದೊರೆತಿದ್ದೇನು? ಇಲ್ಲಿದೆ ವಿವರ
ಅನ್ನದಾತರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಸಾಲ ನೀಡಲು ಮುಂದಾಗಿದೆ, ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲು ಮುಂದಾಗಿರೋ ನಮ್ಮ ಸರ್ಕಾರ, ಶಿಕ್ಷಣದ ವ್ಯವಸ್ಥೆಗೆ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತಿದೆ. ಅಂಗನವಾಡಿ ಆಶಾ ಕಾರ್ಯಕರ್ತೆಯರ ಆರ್ಥಿಕ ಭದ್ರತೆಗಾಗಿ ಸಹಾಯಧನವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ವೃತ್ತಿ ತೆರಿಗೆ ವಿನಾಯಿತಿ ಕಡಿಮೆ ವರಮಾನದ ವರ್ಗಕ್ಕೆ ವೃತ್ತಿ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ. ಈ ಹಿಂದೆ 15 ಸಾವಿರ ಇತ್ತು. ಈಗ 25 ಸಾವಿರಕ್ಕೆ ವೃತ್ತಿ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ, ಮಾಡಲಾಗಿದೆ. ಸರ್ವ ವಲಯಗಳನ್ನು ಗಮನದಲ್ಲಿಟ್ಟುಕೊಂಡು, ಸರ್ವ ವಲಯ ಅಭಿವೃದ್ಧಿಗಾಗಿ ಈ ಬಜೆಟ್ ರೂಪಗೊಂಡಿದೆ ಎಂದು ಶ್ಲಾಘಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post