ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೃಹ ಸಚಿವ ಜಿ.ಪರಮೇಶ್ವರ್ #Home Minister Parameshwar ಅವರಿದ್ದ ಇಂಡಿಗೋ ವಿಮಾನ #Indigo Airlines ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ #Shivamogga Airport ಲ್ಯಾಂಡ್ ಆಗದೆ ಬೆಂಗಳೂರಿಗೆ ಹಿಂತಿರುಗಿರುವ ಘಟನೆ ನಡೆದಿದೆ.
ಮಳೆ, ಮೋಡ ಕವಿದ ವಾತಾವರಣದಿಂದ ರನ್ ವೇ ವಿಸಿಬಲಿಟಿ ಇಲ್ಲದೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಇಂಡಿಗೋ ವಿಮಾನ ಇಂದು ಲ್ಯಾಂಡ್ ಆಗಲಿಲ್ಲ. ಹಲವು ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದರು ಸಾಧ್ಯವಾಗದೆ ವಿಮಾನ ಬೆಂಗಳೂರಿಗೆ ಮರಳಿದೆ.
Also read: ತುಂಗಾ ನದಿ ಪುನಶ್ಚೇತನ ಹಿನ್ನೆಲೆ ಶಾಸಕ ಚನ್ನಬಸಪ್ಪ ಮನೆಗೆ ನಟ ಅನಿರುದ್ ಭೇಟಿ

ಇನ್ನು, ಮಧ್ಯಾಹ್ನ ತಿರುಪತಿಯಿಂದ ಆಗಮಿಸಿದ್ದ ಸ್ಟಾರ್ ಏರ್ ವಿಮಾನ ಲ್ಯಾಂಡ್ ಆಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೇರಿದಂತೆ ವಿವಿಧ ತಂತ್ರಾಂಶ ದ ವ್ಯವಸ್ಥೆ ಇಲ್ಲದೆ ಇರುವುದರಿಂದ ರಾತ್ರಿ ವೇಳೆ, ಮಂಜು ಮತ್ತು ಮೋಡ ಕವಿದ ವಾತಾವರಣದ ಸಂದರ್ಭ ವಿಮಾನ ಪೈಲಟ್‌ಗಳಿಗೆ ರನ್ ವೇಳೆ ಕಾಣಿಸುವುದಿಲ್ಲ. ಇಂತಹ ಸಂದರ್ಭ ವಿಮಾನ ಲ್ಯಾಂಡಿಂಗ್ ಮಾಡದೆ ಹಿಂತಿರುಗಲಿವೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post