ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೋಗಾನೆ ವಿಮಾನ ನಿಲ್ದಾಣಕ್ಕೆ ವಿಮಾನಯಾನ ಪ್ರಾಧಿಕಾರದ ವತಿಯಿಂದ ಲೈಸೆನ್ಸ್ ಸಿಕ್ಕಿದ್ದು, ಇಂದಿನಿಂದಲೇ ವಿಮಾನಗಳ ಟ್ರಯಲ್ ರನ್ ನಡೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ರಾತ್ರಿ ಡಿಜಿಸಿಎ ಲೈಸೆನ್ಸ್ ಸಿಕ್ಕಿದ್ದು, ಇಂದಿನಿಂದಲೇ ರಕ್ಷಣಾ ಪಡೆಗಳ ವಿಮಾನಗಳು ಹಾರಾಟ ನಡೆಸಲಿವೆ. ಹಾಗೂ ರಾಜ್ಯ ಸರ್ಕಾರವೆ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆ ಮಾಡಲಿದೆ ಎಂದು ತಿಳಿಸಿದರು.
ಲೈಸೆನ್ಸ್ ನೀಡುತ್ತಿದ್ದಂತೆ ವಿಮಾನ ನಿಲ್ದಾಣಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗುವುದು. ಸಂಸದನಾಗಿ ತಮ್ಮ ಪ್ರವೇಶಕ್ಕು ಅನುಮತಿ ಇರುವುದಿಲ್ಲ. ಎಲ್ಲವು ನಿಯಮಾನುಸಾರ ಆಗಬೇಕಿದೆ ಎಂದು ತಿಳಿಸಿದರು.
ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದ್ದು, ಸಾರ್ವಜನಿಕರು ಅಂದು ಬೆಳಿಗ್ಗೆ 10 ಗಂಟೆ ಒಳಗಡೆ ವಿಮಾನ ನಿಲ್ದಾಣ ಆವರಣಕ್ಕೆ ಆಗಮಿಸಬೇಕೆಂದು ಸಂಸ ರಾಘವೇಂದ್ರ ಮಾಹಿತಿಯನ್ನು ನೀಡಿದರು.
ಶಿವಮೊಗ್ಗ ವಿಮಾನ ನಿಲ್ದಾಣ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿ ಹೊರಹೊಮ್ಮವ ಜೊತೆಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ರೀತಿಯ ತಯಾರಿ ನಡೆದಿದೆ. ಹೆಮ್ಮೆಯ ವಿಷಯ ಎಂದರೆ, ಸಹಜವಾಗಿ ಹಳೆಯ ಇತಿಹಾಸದಲ್ಲಿ ನಾವು ನೋಡಿದಾಗ ವಿಮಾನ ನಿಲ್ದಾಣ ಉದ್ಘಾಟನೆ ಆದಮೇಲೆ ಮೂರು ವರ್ಷಗಳ ಕಾಲ ವಿಮಾನ ನಿಲ್ದಾಣ ಗಳಿಗೆ ಲೈಸೆನ್ಸ್ ಪ್ರೋಸೆಸ್ ತೆಗೆದುಕೊಳ್ಳುವುದು ಸಮಯ ಹಿಡಿಯುತ್ತದೆ. ಆದರೆ ನಮ್ಮ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಆಗುತ್ತಿರುವ ಮೊದಲೇ ಡಿಸಿಸಿಯಿಂದ ಲೈಸೆನ್ಸ್ ಸಿಕ್ಕಿರುವುದು ನಮಗೆ ಹೆಮ್ಮೆಯ ಸಂಗತಿ ಎಂದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕಾರ್ಯಕ್ರಮಗಳು, ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ನೆರವೇರಲಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮೂರು ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ ಡಿ ಮೇಘರಾಜ್, ಪ್ರಧಾನ ಕಾರ್ಯದರ್ಶಿ ಬಿ. ಕೆ. ಶ್ರೀನಾಥ್, ಕಾರ್ಯದರ್ಶಿ ರಿಷಿಕೇಶ್ ಪೈ, ನಗರ ಬಿಜೆಪಿ ಅಧ್ಯಕ್ಷರಾದ ಸಂತೋಷ್ ಬಳ್ಳಕೆರೆ, ಕೃಷ್ಣಮೂರ್ತಿ ಮತ್ತು ರಮೇಶ್ ಸೇರದಂತೆ ಪ್ರಮುಖರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















