ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುಡಿದ ಅಮಲಿನಲ್ಲಿ ರೈಲ್ವೆ ಹಳಿ ಬಳಿ ಮಲಗಿದ್ದ ಯುವಕನೋರ್ವನ ಕಾಲ ಮೇಲೆ ರೈಲು ಹರಿದ ಪರಿಣಾಮ ಕಾಲು ಕಳೆದುಕೊಂಡಿರುವ ದುರ್ಘಟನೆ ನಗರದಲ್ಲಿ ನಡೆದಿದೆ.
ಬಿಹಾರ ಮೂಲದ ಆದಿಲ್ (16) ರೈಲ್ವೆ ಮೇಲ್ ಸೇತುವೆಯ ಕಾಮಗಾರಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ಉಷಾ ನರ್ಸಿಂಗ್ ಹೋಮ್ ರೈಲ್ವೇ ಗೇಟ್ ಬಳಿ ಮಲಗಿದ್ದ ವೇಳೆ ರೈಲು ಹರಿದು ಕಾಲು ಕಳೆದುಕೊಂಡಿದ್ದಾನೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post