ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಾಸಕ ಕೆ. ಎಸ್. ಈಶ್ವರಪ್ಪ MLA Eshwarappa ಅವರು ಆರ್ಎಸ್ಎಸ್ ಧ್ವಜವು ಭಾರತದ ರಾಷ್ಟ್ರಧ್ವಜ ಆಗಬಹುದು ಎಂದು ನೀಡಿರುವ ಹೇಳಿಕೆ ಖಂಡನೀಯವಾಗಿದ್ದು, ಅದನ್ನು ವಿರೋಧಿಸಿ ಜೂ.3ರಂದು ಎಎಪಿ AAP ಪಕ್ಷದ ವತಿಯಿಂದ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಎಎಪಿ ತಿಳಿಸಿದೆ.
ಪಕ್ಷದ ಮುಖಂಡರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಗರದ ಖಾಸಗಿ ಬಸ್ ನಿಲ್ದಾಣದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ ಎಎಪಿ ಪಕ್ಷದ ವತಿಯಿಂದ ಶಾಸಕ ಕೆ ಎಸ್ ಈಶ್ವರಪ್ಪನವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದೂರು ನೀಡಲಾಗುವುದು ಎಂದರು.
ಎಎಪಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಪ್ರತಿಭಟನೆಯ ನೇತೃತ್ವ ವಹಿಸಲಿದ್ದು, ರಾಜ್ಯ ನಾಯಕರಾದ ದರ್ಶನ್ ಜೈನ್, ವಿಜಯ್ ಶರ್ಮಾ, ಭಾಸ್ಕರ್ ರಾವ್ ಹಾಗೂ ಗೋಪಾಲ್ ಇವರೊಂದಿಗೆ ಸ್ಥಳೀಯ ಮುಖಂಡರುಗಳಾಗಿರುವ ಏಳುಮಲೈ (ಕೇಬಲ್ ಬಾಬು), ತಲ್ಕೀನ್ ಅಹಮದ್, ನೇತ್ರಾವತಿ, ಕಿರಣ್, ಡಿ.ಆರ್. ಲಕ್ಷ್ಮೀಶ, ಮನೋಹರ್ ಗೌಡ ಪ್ರತಿಭಟನೆಯಲ್ಲಿ ಉಪಸ್ಥಿತರಿರಲಿದ್ದಾರೆ.
Also read: ವಾಣಿಜ್ಯ ಬಳಕೆ ಅಡುಗೆ ಅನಿಲ ಬೆಲೆ ಇಳಿಕೆ: ಯಾವ ನಗರದಲ್ಲಿ ಎಷ್ಟು ದರ ಇರಲಿದೆ? ಇಲ್ಲಿ ಮಾಹಿತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post