ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ಸದಾಕಾಲ ತಮ್ಮ ಗುರಿಯೆಡೆಗೆ ಮಾತ್ರ ಗಮನ ಕೇಂದ್ರೀಕರಿಸಿ, ಬದುಕಿದ್ದಾಗಲೇ ಸಾಧನೆ, ಕಂಡ ಕನಸುಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಪಿಇಎಸ್ ಟ್ರಸ್ಟಿ ಎಸ್.ವೈ. ಅರುಣಾದೇವಿ ಕರೆ ನೀಡಿದರು.
ಪಿಇಎಸ್ ಪಬ್ಲಿಕ್ ಶಾಲಾ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ದೇಶವನ್ನು ಪ್ರೇರಣೋತ್ಸವದಲ್ಲಿ ನೋಡಿ ಹರ್ಷ ವ್ಯಕ್ತಪಡಿಸಿದರು.
ತಾಯಿಯಾಗಿ ಮಡಿಲಲ್ಲಿರುವ ಮಕ್ಕಳಿಗೆ ಭವಿಷ್ಯ ಕಟ್ಟಿಕೊಳ್ಳಲು ಪ್ರತಿಯೊಬ್ಬ ಪೋಷಕರಿಗೂ ಸೂಕ್ತ ಸ್ಥಳ ಪ್ರೇರಣ ಪಬ್ಲಿಕ್ ಶಾಲೆಯಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳ ಸಾಧನೆಯನ್ನು ಸ್ಮರಿಸುತ್ತಾ ವಿದ್ಯೆ ಕೇವಲ ಬದುಕಿಗೆ ಮಾತ್ರವಲ್ಲ ಅರ್ಥಪೂರ್ಣ ಸಾರ್ಥಕ ಬದುಕಿಗೆ ಬುನಾದಿ ಹಾಗೂ ಉತ್ತಮ ಪ್ರತಿಭೆಗಳ ತಾಣವಾಗಬೇಕು ಎಂದರು.
ಸಾಧಕರ ಸಾಲಿನಲ್ಲಿರುವ 2024ರ ಅತಿ ಕಿರಿಯ ಚೆಸ್ ಚಾಂಪಿಯನ್ , ಗುಕೇಶ್ ರಾಜು ಮತ್ತು ಪರ್ವತಾರೋಹಿ ತೇನ್ ಸಿಂಗ್ ಅವರ ಜೀವನ ಸಾಧನೆಯ, ಏಳುಬೀಳುಗಳನ್ನು ಸ್ಮರಿಸುತ್ತಾ ನಿಮ್ಮ ಮಕ್ಕಳನ್ನು ಇವರಂತೆ ಸಾಧನೆಯನ್ನು ಮಾಡುವಂತೆ ಹುರಿದುಂಬಿಸಿದರು.
ನಾಳೆ ಹೊಸದೇನು ಬರಲಿದೆ ಎಂದು ಕಾದುನೋಡುವ ಎಳೆಯ ಪೀಳಿಗೆಗೆ ತಂತ್ರಜ್ಞಾನ ಕೊಟ್ಟರೆ ಸಾಲದು. ಸಂಸ್ಕಾರಯುತ ಮತ್ತು ಚಾರಿತ್ರ್ಯಭರಿತ ಬದುಕು ಮಕ್ಕಳಿಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ತಿಳಿಸಿದರು.
Also read: ತಂತ್ರಜ್ಞಾನದ ಮೂಲಕ ಜ್ಞಾನ ವಿಕಸನಗೊಳ್ಳಲಿ: ವಕೀಲ ಭೂಪಾಳಂ ಪ್ರಭಾಕರ್ ಅಭಿಮತ
ಮುಖ್ಯ ಆಡಳಿತಾಧಿಕಾರಿ ಡಾ.ಆರ್. ನಾಗರಾಜ್ ಮಾತನಾಡಿ, ಬೆಂಗಳೂರನಲ್ಲಿರುವ ವಿಭಿನ್ನ ದೃಷ್ಠಿಕೋನಗಳ ವೈವಿಧ್ಯಮಯ ಕಲಿಕೆ ಒಂದೇ ಸ್ಥಳದಲ್ಲಿ ಅದು ನಮ್ಮ ಶಿವಮೊಗ್ಗ ನಗರದಲ್ಲಿ ಅಭಿವೃದಧಿಗೊಳಿಸಬೇಕೆಂಬ ಯಡಿಯೂರಪ್ಪನವರ ಕಲ್ಪನೆ ಇಂದು ಹೆಮ್ಮರವಾಗಿರುವ ಪಿಇಎಸ್ ಟ್ರಸ್ಟ್ ಆಗಿದೆ ಎಂದರು.
ಪ್ರತಿವರ್ಷವೂ ಅತ್ಯುತ್ತಮ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶಾಲೆಯ ಹಾಗೂ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ ಎಂದರು.
ಜ್ಞಾನಕ್ಕೆ ಸಿಂಧೂರವಾಗಿರುವ ಪ್ರೇರಣೆಯ ಅಂಗಳದಲ್ಲಿ ಕೆಜಿಯಿಂದ 10ನೇ ತರಗತಿವರೆಗೆ ಮಕ್ಕಳು ಕಲೆ , ಸಾಹಿತ್ಯ ಹಾಗೂ ಐತಿಹಾಸಿಕ ಪರಂಪರೆ, ಭಕ್ತಿಪ್ರಧಾನ ಕಥೆಗಳು, ಶ್ರವಣ ಕುಮಾರನ ಕಥೆ, ಭಕ್ತ ಪ್ರಲ್ಹಾದನ ಕಥೆ, ವೀರನಾಯಕರ ಕಥೆಗಳು, ದೇಶದ ಬೆನ್ನೆಲುಬಾದ ನಾಡಿನ ರೈತ, ಸೈನಿಕರ ಕಥೆಗಳು, ಹಾಲಿವುಡ್ಬಾಲಿವುಡ್ ಎಲ್ಲಾ ಕಥೆಗಳನ್ನು ನೃತ್ಯದಲ್ಲಿ ಪ್ರದರ್ಶಿಸುತ್ತಾ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದರು.
ಸಂಸ್ಥೆಯ ಆಡಳಿತ ಮಂಡಳಿಯ ತೇಜಸ್ವಿನಿ ರಾಘವೇಂದ್ರ, ಸುಭಾಷ್ ರಾಘವೇಂದ್ರ, ಉದಯಕುಮಾರ್ ಮತ್ತು ಎಲ್ಲಾ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕ ವರ್ಗ, ಬೋದಕೇತರ ವರ್ಗದವರು ಉಪಸ್ಥಿತರಿದರು.
ಈ ಕಾರ್ಯಕ್ರಮದ ಕುರಿತು ಶಾಲಾ ವರದಿಯನ್ನು ಪ್ರಾಂಶುಪಾಲರು ಸೋಮಶೇಖರಯ್ಯ ಅವರು ಮಂಡಿಸಿದರು. ರೋಸಿ ಸಿಕ್ವೇರಾ ಸ್ವಾಗತಿಸಿ, ಮಂಜುಳಾ ವಂದನಾರ್ಪಣೆ ಮಾಡಿದರು. ಶಿಕ್ಷಕಿ ಸುಧಾರಣೆ ಅವರು ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post