ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ:2020-21ನೆಯ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ಕೊರೋನಾದಿಂದ ಲಾಕ್‌ಡೌನ್ ವಿಧಸಲಾಗಿದ್ದ ಪರಿಣಾಮ ಶಾಲೆಯ ಒಟ್ಟು 220 ದಿನಗಳಲ್ಲಿ 80 ದಿನಗಳು ಮಾತ್ರ ಶಾಲೆ ನಡೆಸಲು ಸಾಧ್ಯವಾಯಿತು. ಇನ್ನು ಉಳಿದಂತೆ ಆನ್‌ಲೈನ್ ಹಾಗೂ ಆಫ್‌ಲೈನ್ ಕ್ಲಾಸ್‌ಗಳನ್ನು ನಡೆಸಿ ಪಠ್ಯಕ್ರಮಗಳನ್ನು ಮುಗಿಸಲಾಯಿತು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಪ್ರಸಕ್ತ ವರ್ಷದ ಎಲ್ಲಾ ಪರೀಕ್ಷೆಗಳನ್ನು ನಿಗಧಿತ ಸಮಯದಲ್ಲಿ ಮುಗಿಸಲಾಗಿದೆ. ಏಪ್ರಿಲ್ 30ರಂದು 1ರಿಂದ 9ನೆಯ ತರಗತಿಯ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಪ್ರಕಟಿಸಿ ಅಂಕಪಟ್ಟಿಯನ್ನು ವಿತರಣೆ ಮಾಡಲಾಗುವುದು. ಇದರ ಜೊತೆಗೆ ಈ ವರ್ಷದ ಶಾಲಾ ವಾರ್ಷಿಕೋತ್ಸವವನ್ನು ಸೇರಿಕೊಂಡಂತೆ ಎಲ್ಲಾ ಕಾರ್ಯಕ್ರಮಗಳನ್ನು ಕೋವಿಡ್ ಮಾರ್ಗಸೂಚನೆಯ ಪ್ರಕಾರ ನಡೆಸಲಾಗಿದೆ. ಶಾಲಾ ಶುಲ್ಕದಲ್ಲಿ ಸರ್ಕಾರದ ಆದೇಶದಂತೆ ಶೇ.೩೦ರಷ್ಟು ಕಡಿತಗೊಳಿಸಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಸಕ್ತ ವರ್ಷ 2021-22ನೆಯ ಸಾಲಿಗೆ ಸರ್ಕಾರ ಆದೇಶ ಹೊರಡಿಸದಿದ್ದರೂ ಸಹ ಈ ವರ್ಷದ ಶಾಲಾ ಶುಲ್ಕದಲ್ಲಿ ಶೇ.30ರಷ್ಟು ರಿಯಾಯಿತಿಯನ್ನು ನೀಡಲು ತೀರ್ಮಾನಿಸಲಾಗಿದೆ. ಹಾಗೂ ಪೋಷಕರು ಇದರ ಸದಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿಕೊಳ್ಳಲಾಗಿದೆ.
ಮೇ 1ರಿಂದ ಶಾಲಾ ದಾಖಲಾತಿ ಪ್ರಾರಂಭಗೊಳ್ಳಲಿದೆ. ಮತ್ತು ಮೇ 15ರಿಂದ ಶಾಲೆಯಲ್ಲಿ ಆನ್‌ಲೈನ್ ಶಿಕ್ಷಣವು ಪ್ರಾರಂಭಗೊಳ್ಳುತ್ತದೆ. ಕೋವಿಡ್‌ಗೆ ಸಂಬಂಧಪಟ್ಟಂತೆ ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಕ್ಕಳೆ ವ್ಯವಸ್ಥೆ ಮಾಡಿಕೊಳ್ಳುವುದು ಮತ್ತು ಕೋವಿಡ್ ಸೋಂಕಿತ ವಿದ್ಯಾರ್ಥಿಗಳಿಗೆ ಶಾಲೆಯಿಂದ ವಿಶೇಷ ಗಮನಹರಿಸಲಾಗುವುದು ಎಂದು ಹೇಳಲಾಗಿದೆ.
ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪರಿಗಣಿಸಿ ಶಾಲೆಯನ್ನು ಪುನರಾರಂಭಿಸಲಾಗುತ್ತದೆ.ತರಗತಿಗಳಲ್ಲಿ ಶೇ.50ರಷ್ಟು ಆಸನದ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲಾ ಶಿಕ್ಷಕ ವರ್ಗದವರಿಗೆ ಕೋವಿಡ್ ಲಸಿಕೆಗಳನ್ನು ಹಾಕಿಸಲು ವ್ಯವಸ್ಥೆ ಮಾಡಲಾಗುವುದು. ಕಾಲಕಾಲಕ್ಕೆ ಬರುವ ಸರ್ಕಾರದ ಎಲ್ಲಾ ಮಾರ್ಗಸೂಚನೆಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಶಾಲಾ ಕಾರ್ಯದರ್ಶಿ ಎಸ್.ಕೆ. ಶೇಷಾಚಲ, ಟ್ರಸ್ಟ್ ಕಾರ್ಯದರ್ಶಿ ಬಿ.ಎಲ್. ಶಾಮಸುಂದರ್, ಖಜಾಂಚಿ ಹೆಚ್. ಮಂಜುನಾಥ, ಶೈಕ್ಷಣಿಕ ನಿರ್ದೇಶಕ ನಾಗರಾಜ, ಪ್ರಾಂಶುಪಾಲ ಎನ್. ಸಿ. ಮನು ಬಿಸೆ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post