ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಲ್ಲಾ ವರ್ಗದ ಜನರಿಗೂ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯು ಎಂದಿನಂತೆ ಮಣಿಪಾಲ್ ಆರೋಗ್ಯ ಕಾರ್ಡ್-2025ರ #Manipal Health Card ನೋಂದಣಿಯನ್ನು ಆರಂಭಿಸಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್ ಶೆಟ್ಟಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಕಳೆದ 25 ವರ್ಷಗಳಿಂದ ಮಣಿಪಾಲ್ ಆರೋಗ್ಯ ಕಾರ್ಡನ್ನು ಪರಿಚಯಿಸಲಾಗುತ್ತಿದೆ. ಈ ಭಾರಿ ಸುಮಾರು 6.82 ಲಕ್ಷ ಸದಸ್ಯರು ಕಾರ್ಡನ್ನು ಹೊಂದಿದ್ದಾರೆ. ಸುಮಾರು 7ವರೆ ಲಕ್ಷ ಗುರಿಮುಟ್ಟುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ ಕಳೆದ ಬಾರಿ 22.8 ಕೋಟಿ ಮೊತ್ತದಷ್ಟು ರಿಯಾಯಿತಿಯನ್ನು ಮಣಿಪಾಲ್ ಆಸ್ಪತ್ರೆ ನೀಡಿದೆ ಎಂದರು.

ಕಾರ್ಡ್ ಸಣ್ಣದು-ಪ್ರಯೋಜನ ದೊಡ್ಡದು ಎಂಬ ನಿಟ್ಟಿನಲ್ಲಿ ಈ ಕಾರ್ಡನ್ನು ಪರಿಚಯಿಸಲಾಗುತ್ತಿದ್ದು, ಸಮಾಜದ ಎಲ್ಲಾ ವರ್ಗಗಳಿಗೂ ಇದು ಅನುಕೂಲವಾಗುತ್ತದೆ. ಒಂದು ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಯಾರಾದರೂ ಸದಸ್ಯರಾಗಿ ಪ್ರಯೋಜನಗಳನ್ನು ಪಡೆಯಬಹುದು. ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ ಎಂಬುದು ಮಣಿಪಾಲ್ ಆರೋಗ್ಯ ಕಾರ್ಡಿನ ಧ್ಯೇಯವಾಕ್ಯವಾಗಿದೆ ಎಂದರು.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕಾರ್ಡ್‍ದಾರರಿಗೆ ರಿಯಾಯಿತಿ ಪ್ರಯೋಜನಗಳು
ತಜ್ಞ ಮತ್ತು ಸೂಪರ್-ಸ್ಪೆಷಲಿಸ್ಟ್ ಸಮಾಲೋಚನೆ ಶುಲ್ಕಗಳಲ್ಲಿ 50% ರಿಯಾಯಿತಿ (ಓಪಿಡಿ ದಿನಗಳು), ರೋಗನಿರ್ಣಯ ಮತ್ತು ಪ್ರಯೋಗಾಲಯ ಪರೀಕ್ಷೆಗಳ ಮೇಲೆ 25% ರಿಯಾಯಿತಿ, ರೇಡಿಯಾಲಜಿ, ಓಪಿಡಿ ಕಾರ್ಯವಿಧಾನಗಳು ಮತ್ತು ಮಧುಮೇಹ ಪಾದದ ಆರೈಕೆಯ ಮೇಲೆ 20% ರಿಯಾಯಿತಿ, ಡಯಾಲಿಸಿಸ್‍ನಲ್ಲಿ ರೂ. 100 ರಿಯಾಯಿತಿ, ಆಸ್ಪತ್ರೆ ಔಷಧಿಗಳ ಮೇಲೆ 10% ವರೆಗೆ ರಿಯಾಯಿತಿ, ಸಾಮಾನ್ಯ ವಾರ್ಡ್ ಒಳರೋಗಿಗಳ ಬಿಲ್‍ಗಳಲ್ಲಿ 25% ರಿಯಾಯಿತಿ (ಉಪಭೋಗ್ಯ ವಸ್ತುಗಳು ಮತ್ತು ಪ್ಯಾಕೇಜ್‍ಗಳನ್ನು ಹೊರತುಪಡಿಸಿ) ನೀಡಲಾಗುತ್ತದೆ ಎಂದರು.

www.manipalhealthcard.comಗೆ ಭೇಟಿ ನೀಡಿ ಅಥವಾ 9980854700, 08202923748 ಅನ್ನು ಸಂಪರ್ಕಿಸಿ. ಎಲ್ಲಾ ನಮ್ಮ ಅಧಿಕೃತ ಪ್ರತಿನಿಧಿಗಳ ಮೂಲಕ ನೋಂದಣಿ ಮಾಡಬಹುದು ಎಂದರು.

ಶಿವಮೊಗ್ಗ : ಕಸ್ತೂರ್ಬಾ ಆಸ್ಪತ್ರೆ ಮಾಹಿತಿ ಕೇಂದ್ರ, ನವೀನ ಟೈಯರ್ಸ್, ವಿನೋಭನಗರದ ನವೀನ್ ಕೆ.ಆರ್. 7829540338, ಪ್ರತಿನಿಧಿಗಳಾದ ವಿಜಯ್ ಆನಂದ್, 9844383344, ಬಾಪೂಜಿ ಎಂ. 9916131880, ಬಾಲಕೃಷ್ಣ ಭಟ್-8792128878 ವಿಪ್ರ ಸೌಹಾರ್ದ, 9242373839, ಸೇಂಟ್ ಮಿಲಾಗ್ರೆಸ್ ಸೌಹಾರ್ದ 9538400604, ಕೃಷಿಕ್ ಸೌಹಾರ್ದ, 9686264966, ಶಾರದ ಸೌಹಾರ್ದ- 9880838430, ನಿತಿನ್ ಎಸ್.ಮೂರ್ತಿ: 9480028241, ಕಸ್ತೂರ್ಬಾ ಆಸ್ಪತ್ರೆ ಮಾಹಿತಿ ಕೇಂದ್ರ, ಗಾಂಧಿ ಬಜಾರ್, ಪ್ರವೀಣ್ ಎಸ್. ನವಲೆ-9980731051 ಮತ್ತು ಹತ್ತಿರದ ಅಧಿಕೃತ ಪ್ರತಿನಿಧಿಗಳಲ್ಲಿ ನೊಂದಾಯಿಸಿಕೊಳ್ಳಬಹುದು.
ಪತ್ರಿಕಾಗೋಷ್ಟಿಯಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಾರುಕಟ್ಟೆ ವಿಭಾಗದ ಪ್ರತಿನಿಧಿಯಾದ ಅನಿಲ್, ಸಂದೀಪ್, ಪ್ರತಿನಿದಿಗಳಾದ ನವೀನ್ ಮತ್ತು ವನಿತಾ, ಬಾಲಕೃಷ್ಣ ಭಟ್ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post