ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸುಬ್ಬಯ್ಯ ವೈದ್ಯಕೀಯ ಕಾಲೇಜಿನ #Subbaiah Medical College ಪಿಜಿ ವಿಭಾಗದಲ್ಲಿ ನರರೋಗ ಸಂಬಂಧಿತ ಪ್ರಾಯೋಗಿಕ ಪ್ರಬಂಧ ಪ್ರಸ್ತುತಿ (Case Presentation)ಗೆ ಅಮೆರಿಕಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ನರರೋಗ ತಜ್ಞ ಡಾ.ಶ್ರೇಯಸ್ ಗಂಗಾಧರ್ ಅವರು ಮಾಡರೇಟರ್ ಆಗಿ ನಿರ್ವಹಣೆ ಮಾಡಿದ್ದು ವಿಶೇಷವಾಗಿತ್ತು.
ಡಾ. ಶ್ರೇಯಸ್ ಗಂಗಾಧರ್ #Dr. Shreyas Gangadhar ಅವರು, ಅಮೆರಿಕದ ಮಿಸ್ಸಿಸ್ಸಿಪ್ಪಿ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದಲ್ಲಿ ಅಸೋಸಿಯೇಟ್ ಪ್ರಾಧ್ಯಾಪಕ ಮತ್ತು ಕ್ಲಿನಿಕಲ್ ಕಾರ್ಯಾಚರಣೆಗಳ ಉಪಾಧ್ಯಕ್ಷರು ಮತ್ತು ಪಾರ್ಶ್ವವಾಯು ಮತ್ತು ಸೆರೆಬ್ರೊವಾಸ್ಕುಲರ್ ಕಾಯಿಲೆಗಳಲ್ಲಿ ಪರಿಣತಿ ಹೊಂದಿರುವ ಮಂಡಳಿಯಿAದ ಪ್ರಮಾಣೀಕೃತ ನರವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಪದವಿ ಜನರಲ್ ಮೆಡಿಸನ್ ವಿಭಾಗದ 2ನೇ ವರ್ಷದ ವಿದ್ಯಾರ್ಥಿನಿ ಡಾ.ಸಂಜನಾ ರಾಜಕುಮಾರ್ ಅವರು ನರರೋಗ ಸಂಬಂಧಿತ ಪ್ರಾಯೋಗಿಕ ಪ್ರಸ್ತುತಿ ನೀಡಿದರು.
ಈ ಪ್ರಸ್ತುತಿಗೆ ಮಾಡರೇಟರ್ ಆಗಿ ಡಾ.ಶ್ರೇಯಸ್ ಗಂಗಾಧರ್ ಅವರು ನಿರ್ವಹಣೆ ಮಾಡಿದರು.
Also read: ಹಸುವಿನ ಕೆಚ್ಚಲಿನಲ್ಲಿ ಹಾಲು ಕರೆಯುವ ವಿವಿಧ ವಿಧಾನಗಳು ಯಾವುವು?
ಪ್ರಸ್ತುತಿ ವೇಳೆ ರೋಗಿಯ ಮೇಲಿನ ಸಂಶೋಧನೆ ಅಂದರೆ ರೋಗಿಯ ಇತಿಹಾಸ, ಬಿಪಿ, ಶುಗರ್ ಸೇರಿದಂತೆ ಎಲ್ಲ ರೀತಿಯ ಹಿನ್ನೆಲೆಯ ಮಾಹಿತಿಯನ್ನು ವಿವರಿಸಲಾಯಿತು. ಅಲ್ಲದೇ, ಈ ಕುರಿತಂತೆ ಹಿನ್ನೆಲೆಯ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಯಿತು.
ಕಾಲೇಜಿನ ವೈದ್ಯರಿಗೆ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಈ ಡೆಮೋ ಮಾಹಿತಿ ಪ್ರಸ್ತುತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಡಾ.ಶ್ರೇಯಸ್ ಗಂಗಾಧರ್ ಕುರಿತು:
ಡಾ. ಶ್ರೇಯಸ್ ಗಂಗಾಧರ ಅವರು ಪಾರ್ಶ್ವವಾಯು ಮತ್ತು ಸೆರೆಬ್ರೊವಾಸ್ಕುಲರ್ ಕಾಯಿಲೆಗಳಲ್ಲಿ ಪರಿಣತಿ ಹೊಂದಿರುವ ಮಂಡಳಿಯಿಂದ ಪ್ರಮಾಣೀಕೃತ ನರವಿಜ್ಞಾನಿ. ಅವರು ಮಿಸ್ಸಿಸ್ಸಿಪ್ಪಿ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದಲ್ಲಿ ಕ್ಲಿನಿಕಲ್ ಕಾರ್ಯಾಚರಣೆಗಳ ಉಪಾಧ್ಯಕ್ಷರಾಗಿ ಮತ್ತು ನಾಳೀಯ ನರವಿಜ್ಞಾನದ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ಗಂಗಾಧರ ಅವರು ಮೈಸೂರು ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ಪದವಿಯನ್ನು ಪಡೆದಿದ್ದಾರೆ. ನಂತರ ದಕ್ಷಿಣ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ನರವಿಜ್ಞಾನ ರೆಸಿಡೆನ್ಸಿ ಮತ್ತು ನಾಳೀಯ ನರವಿಜ್ಞಾನ ಫೆಲೋಶಿಪ್ ಪಡೆದರು. ಅವರು ಯುಎಂಎಂಸಿಯಿಂದ ಕ್ಲಿನಿಕಲ್ ಇನ್ವೆಸ್ಟಿಗೇಷನ್’ನಲ್ಲಿ ಮಾಸ್ಟರ್ ಆಫ್ ಸೈನ್ಸ್ ಪದವಿಯನ್ನು ಸಹ ಪಡೆದಿದ್ದಾರೆ. ಅಲ್ಲಿ ಅವರು ಪಾರ್ಶ್ವವಾಯು ಆರೈಕೆ ಆಪ್ಟಿಮೈಸೇಶನ್, ಟೆಲಿನ್ಯೂರಾಲಜಿ ಮತ್ತು ಗುಣಮಟ್ಟ ಸುಧಾರಣಾ ಉಪಕ್ರಮಗಳಲ್ಲಿ ಪರಿಣತಿಯನ್ನು ಕಲಿತಿದ್ದಾರೆ.
ದಂತ ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ವಿನಯ ಶ್ರೀನಿವಾಸ್, ಡೀನ್ ಡಾ.ವಿನಾಯಕ್, ಪ್ರಾಂಶುಪಾಲ ಡಾ.ಸಿ.ಎಂ. ಸಿದ್ದಲಿಂಗಪ್ಪ, ಉಪಪ್ರಾಂಶುಪಾಲ ಡಾ. ಶಿವಮೂರ್ತಿ ಸೇರಿದಂತೆ ವಿವಿಧ ವಿಭಾಗದ ವೈದ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post