ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದು, ಮೇಯರ್‌ಗೆ ಹಿಂದುಳಿದ ವರ್ಗ ಎ ಮತ್ತು ಉಪಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾತಿ ಪ್ರಕಟಿಸಲಾಗಿದೆ.
ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದ್ದು, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ, ಕಲ್ಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಮತ್ತು ವಿಜಯಪುರದ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಬದಲಾಗಲಿದ್ದಾರೆ.
ಶಿವಮೊಗ್ಗ ಪಾಲಿಕೆಗೆ ಸಂಬಂಧಪಟ್ಟಂತೆ ಕಳೆದ ಒಂದು ವರ್ಷದಿಂದ ಮೇಯರ್ ಸ್ಥಾನದಲ್ಲಿದ್ದ ಸುನೀತ ಅಣ್ಣಪ್ಪ ಮತ್ತು ಶಂಕರ್ ಗನ್ನಿ ಸ್ಥಾನ ಬದಲಾಗುವ ಸಾಧ್ಯತೆ ಇದ್ದು, ಹಲವರು ಮೇಯರ್, ಉಪಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
Also read: ಡಿವಿಎಸ್ ಪಾಲಿಟೆಕ್ನಿಕ್ ಲ್ಯಾಟರಲ್ ಎಂಟ್ರಿ ಡಿಪ್ಲೊಮಾ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ
ಪ್ರಸ್ತುತ 2023ರವರೆಗೆ ಬಿಜೆಪಿ ಅಧಿಕಾರಾವಧಿಯಿದ್ದು, ಜ್ಞಾನೇಶ್ವರ್, ರಾಹುಲ್ ಬಿದರೆ, ಮಂಜುನಾಥ್, ಪ್ರಭು, ಸುರೇಖಾ ಮುರುಳೀಧರ್, ಲತಾ ಗಣೇಶ್, ಸುವರ್ಣ ಶಂಕರ್ ಮೇಯರ್ ಮತ್ತು ಉಪಮೇಯರ್ ಸ್ಥಾನದ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















