ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಅವರು ಮತ್ತೆ ಸಂಸದರಾದ ಬೆನ್ನಲ್ಲೇ ಜಿಲ್ಲೆಯ ಜನರಿಗೆ ಗುಡ್ ನ್ಯೂಸ್ ನೀಡಿದ್ದು, ಶಿವಮೊಗ್ಗ-ಚೆನ್ನೈ #Shivamogga-Chennai ನಡುವೆ ನೂತನ ರೈಲು ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಶಿವಮೊಗ್ಗ-ಚೆನ್ನೈ ನಡುವೆ ನೂತನ ಸೆಮಿಫಾಸ್ಟ್ ರೈಲು ಸಂಚಾರಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಸಿರು ನಿಶಾನೆ ತೋರಿದ್ದಾರೆ ಎಂದರು.
Also read: ಶಿವಮೊಗ್ಗ | ಜಿಲ್ಲಾ ಪಂಚಾಯತ್ ಸಿಇಒ ಲೋಖಂಡೆ ವರ್ಗಾವಣೆ | ಯಾರು ಹೊಸ ಅಧಿಕಾರಿ?
ಎಂದಿನಿಂದ ಆರಂಭ? ಸಮಯವೇನು?
ಈ ನೂತನ ರೈಲು ಸಂಚಾರ ಆರಂಭಕ್ಕೆ ದಿನಾಂಕ ಇನ್ನೂ ನಿಗದಿಯಾಗಬೇಕಿದ್ದು, ಅತಿ ಶೀಘ್ರದಲ್ಲೇ ಸಂಚಾರ ಆರಂಭವಾಗಲಿದೆ.
ಇನ್ನು, ಈ ರೈಲು ಪ್ರತಿದಿನ ಸಂಚರಿಸಲಿದೆ. ಶಿವಮೊಗ್ಗದಿಂದ ಸಂಜೆ 4 ಗಂಟೆಗೆ ಹೊರಡಲಿದ್ದು ಬೆಳಗ್ಗಿನ ಜಾವ 4-45ಗೆ ಚೆನ್ನೈ ತಲುಪಲಿದೆ. ರಾತ್ರಿ 11-30 ಹೊರಟು ಮರುದಿನ 12 ಗಂಟೆಗೆ ಶಿವಮೊಗ್ಗ ತಲುಪಲಿದೆ
ಬೆಂಗಳೂರು ಪೇಟೆ, ಚೋಳಾರು ಗುಂಟೆಯ ಮೇಲೆ ಚೆನ್ನೈಗೆ ತಲುಪಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post