ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡಿನ ಸ್ಟಾರ್ಟ್ ಅಪ್’ಗಳಿಗೆ ಅನ್ವೇಷಣಾ ಸಂಸ್ಥೆ ಉತ್ತಮ ವಿಕಸನ ವೇದಿಕೆ ಕಲ್ಪಿಸುತ್ತಿದೆ ಎಂದು ಸಿ.ಎಂ. ಪಾಟೀಲ್ ಹೇಳಿದ್ದಾರೆ.
ನಗರದ ಪಿಇಎಸ್‌ಐಟಿಎಂ ಕಾಲೇಜಿನಲ್ಲಿ ಅನ್ವೇಷಣಾ ಇನ್ನೋವೇಷನ್ ಅಂಡ್ ಎಂಟರ್ ಪ್ರೀನ್ಯೋರಲ್ ಫೋರಂ ವತಿಯಿಂದ ಉದ್ಯಮಶೀಲತೆಯ ಅನ್ವೇಷಣಾ ನಾಯಕತ್ವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಕಾರ್ಯಕ್ರಮವು ಉದ್ಯಮಶೀಲತೆ ಹಾಗೂ ಸ್ಟಾರ್ಟ ಅಪ್’ಗಳಿಗೆ ಅನುಕೂಲಕರವಾಗಲು ಒಂದು ವೇದಿಕೆಯನ್ನು ಒದಗಿಸಿಕೊಟ್ಟಿದೆ. 4 ತಿಂಗಳುಗಳ ಅತೀ ಸಣ್ಣ ಅವಧಿಯಲ್ಲಿ ಅನ್ವೇಷಣಾ ಇನ್ನೋವೇಷನ್ ಅಂಡ್ ಎಂಟರ್ ಪ್ರೀನ್ಯೋರಲ್ ಫೋರಮ್ ಸ್ಟಾರ್ಟ್ ಅಪ್’ಗಳಿಗೆ ಬೆಂಬಲ ಕೊಡುವಲ್ಲಿ ಪ್ರಗತಿಯನ್ನು ಕಂಡಿದೆಯೆಂದು ತಿಳಿಸಲು ಸಂತೋಷವಾಗುತ್ತಿದೆ ಎಂದರು.
ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯಲ್ಲಿನ ಆಗು-ಹೋಗುಗಳ ಹಾಗೂ ಕಳೆದ ದಶಕದ ವಿಕಾಸನವನ್ನು ಹಣದ ಸದ್ಬಳಕೆ, ಹೂಡಿಕೆದಾರರ ಆಕರ್ಷಣೆ, ಹಣದ ಒಳಹರಿವು ಹೆಚ್ಚಿಸುವುದು, ವರ್ಷಾವಾರು ವ್ಯವಹಾರಗಳ ಬಗ್ಗೆ ತಿಳಿಸಿದರು.
ಈ ನಾಯಕತ್ವ ಸರಣಿಯು, ಅನ್ವೇಷಣಾ ಸಂಸ್ಥೆಯು ಮೊದಲನೆ ಕಾರ್ಯಕ್ರಮವಾಗಿದ್ದು, ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ನೆಡೆದ ಸ್ಟಾರ್ಟ್ ಅಪ್ ಪರಿಸರ ವಿಕಸನಕ್ಕೆ ಒಂದು ವೇದಿಕೆಯನ್ನು ಒದಗಿಸಿಕೊಟ್ಟಿದೆ ಎಂದು ತಿಳಿಸಿದರು.
ಸ್ಟಾರ್ಟ ಅಪ್ ಎದುರಿಸುತ್ತಿರುವ ಸವಾಲುಗಳನ್ನು ಅರ್ಥ ಮಾಡಿಕೊಂಡು, ಸಾಂತ್ವಾನ ನೀಡಿ, ಅವುಗಳನ್ನು ಬೆಂಬಲಿಸಿ ಪ್ರೋತ್ಸಾಹಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳೊಂದಿಗೆ ದುಂಡು ಮೇಜಿನ ಚರ್ಚೆಗೆಳು ನಡೆದವು.
ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯಲ್ಲಿ ಯುವಕರನ್ನು ಹೇಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು. ಲಭ್ಯವಿರುವ ಮಾರುಕಟ್ಟೆ ಮಾಹಿತಿ ಕಲ್ಪಿಸುವುದು, ಅರ್ಹ ಸ್ಟಾರ್ಟ್ ಅಪ್’ಗಳಿಗೆ ಮಾರ್ಗದರ್ಶನ ನೀಡುವುದು, ಹಣದ ಒಳಹರಿವಿನ ಕುರಿತಾದ ಉದ್ಯಮಿಗಳೊಂದಿಗಿನ ಒಡಂಬಡಿಕೆ ಹಾಗೂ ಸ್ವದೇಶಿ ಸ್ಟಾರ್ಟ್ ಅಪ್‌ಗಳಿಗೆ ನೀಡುವ ಆರಂಭಿಕ ನಿಧಿಯ ಸದ್ಬಳಕೆಗೆ, ಏಂಜಲ್ ಫಂಡಿಂಗ್’ನAತಹ ಸಂಸ್ಥೆಗಳ ಬೆಂಬಲ ಪಡೆಯುವ, ಇತರೆ ವಿಚಾರಗಳ ಬಗ್ಗೆ ಚರ್ಚೆಗಳು ನಡೆದವು.
Also read: ನಮ್ಮ ಮನವೇ ಅಯೋಧ್ಯಾನಗರಿ ಆಗಲಿ: ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಆಶಯ
ಅಲ್ಲದೇ, ಹೊಸ ಸ್ಟಾರ್ಟ್’ಅಪ್’ಗಳ ಸವಾಲುಗಳನ್ನು ಅನ್ವೇಷಣಾ ಸಂಸ್ಥೆಯು ಹೇಗೆ ಅರ್ಥೈಸಿಕೊಂಡು ಅವರ ಈ ಸ್ಟಾರ್ಟ್ ಅಪ್ ಪ್ರಯಾಣದಲ್ಲಿ ಸಹಕಾರಿಯಾಗುತ್ತದೆ ಎಂಬುದರ ಜೊತೆಗೆ ಆರೋಗ್ಯ, ಕೃಷಿ, ಡೀಪ್ ಟೆಕ್ನಾಲಾಜಿಗಳ ಬಗ್ಗೆ ಚರ್ಚಿಸಲಾಯಿತು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಸ್ಟಾರ್ಟ್ ಅಪ್ ಯೋಜನೆಗಳ ಹಾಗೂ ಅವುಗಳ ಅಗತ್ಯತೆಯನ್ನು ತಿಳಿ ಹೇಳಿದರು.
ಉದ್ಯಮಶೀಲತೆಯ ಬೆಳವಣಿಗೆಗೆ ಶಿವಮೊಗ್ಗ ನಗರವನ್ನು ಕೇಂದ್ರ ಬಿಂದುವಾಗಿಸುವ ಕ್ರಮಗಳಿಗೆ ಬೆಂಬಲ ಸೂಚಿಸಿ ಅದಕ್ಕೆ ಬೇಕಾಗುವ ಸವಲತ್ತುಗಳನ್ನು ನೀಡುವ ಭರವಸೆ ನೀಡಿದರು.
ಈ ಸಭೆಯಲ್ಲಿ ಶಿವಮೊಗ್ಗ ನಗರದ 40ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು, 10ಕ್ಕೂ ಹೆಚ್ಚು ಯುವ ಉದ್ಯಮಿಗಳು ಮತ್ತು 35ಕ್ಕೂ ಹೆಚ್ಚು ಆರಂಭಿಕ ಸ್ಟಾರ್ಟ್ ಅಪ್ ಉದ್ಯಮಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post