ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿ ಕಾರ್ಮಿಕರಿಗೂ ಕಾಲಿಗೆ ಗನ್ ಶೂ ಮತ್ತು ಗ್ಲೌಸ್ ಕೊಡಿಸಲು ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಭದ್ರಾ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ. ಪವಿತ್ರ ರಾಮಯ್ಯ ಭರವಸೆ ನೀಡಿದರು.
ಅವರು ಗುರುವಾರ ಹಸೂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಸೂಡಿ ಪಾರಂ ಗ್ರಾಮದ ಭದ್ರಾ ಎಡ ನಾಲೆಯಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.

Also read: ಶಾಸಕ ಸಂಗಮೇಶ್‌ರಿಂದ ವಿನಯ್ ಗುರೂಜಿ ಗೋಶಾಲೆಗೆ ಒಂದು ಲೋಡ್ ಮೇವು ರವಾನೆ
ಕಾರ್ಮಿಕರ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಸುಮಾರು 267 ಗ್ರಾಮ ಪಂಚಾಯತಿ ಗಳಿವೆ. ಪ್ರತಿ ಗ್ರಾಮ ಪಂಚಾಯತಿಗೂ ಅಂದಾಜು 10,000ರೂ. ವೆಚ್ಚದಲ್ಲಿ ಕಾರ್ಮಿಕರಿಗೆ ಕಾಲಿಗೆ ಗನ್ ಶೂ ಮತ್ತು ಕೈಗೆ ಗ್ಲೌಸ್ ವಿತರಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ, ನೀರಾವರಿ ಇಲಾಖೆಯ ಅಭಿಯಂತರಾದ ಉಮೇಶ್, ಮಾಜಿ ಗ್ರಾಮ ಪಂಚಾಯತಿ ಸದಸ್ಯ ವೀರೇಶ್, ಹಸೂಡಿ ಗ್ರಾಮ ಪಂಚಾಯತಿ ಪಿಡಿಒ ಹಾಗೂ ರೈತ ಮುಖಂಡರು, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.










Discussion about this post