ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿದರೆ ಗ್ರಾಮದಲ್ಲಿರುವ ಇಸ್ಕಾನ್ #ISKCON ಶಿವಮೊಗ್ಗ ವತಿಯಿಂದ ಏ.11ರಿಂದ 26ರವರೆಗೆ ರವೀಂದ್ರನಗರದ ಶ್ರೀ ಬಲಮುರಿ ಗಣಪತಿ ದೇವಸ್ಥಾನದ ಪಕ್ಕದ ಸರ್ಕಾರಿ ಶಾಲಾ ಭವನದಲ್ಲಿ 6 ರಿಂದ 14ವರ್ಷದೊಳಗಿನ ಮಕ್ಕಳಿಗೆ ಬೇಸಿಗೆ ಶಿಬಿರವನ್ನು #Summer camp ಹಮ್ಮಿಕೊಳ್ಳಲಾಗಿದೆ ಎಂದು ಇಸ್ಕಾನ್ ಶಿವಮೊಗ್ಗದ ವ್ಯವಸ್ಥಾಪಕ ರಸಿಕ ಶೇಖರ ಚೈತನ್ಯ ದಾಸ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಶಿಬಿರದ ಪ್ರವೇಶ ದರ 1500 ರೂ. ಇದ್ದು, ಪ್ರತಿ ದಿನ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3ರ ವರೆಗೆ ಶಿಬಿರ ನಡೆಯಲಿದ್ದು, ಪ್ರತಿದಿನ ಭಗವದ್ಗೀತೆ ಶ್ಲೋಕ ಪಠಣ, ಭಜನೆ-ಕೀರ್ತನ ಕಲಿಕೆ, ಶ್ರೀಕೃಷ್ಣನ ದಿವ್ಯ ಲೀಲೆಗಳ ಶ್ರವಣ, ಸನಾತನ ಸಂಸ್ಕøತಿಯ ಪೂಜಾವಿಧಾನದ ಮಾಹಿತಿ, ನಾಟಕ, ಆಟ, ಮನೋರಂಜನೆ, ಯೋಗ ಕಲಿಕೆ ಮತ್ತು ಕರಕುಶಲ, ಬೆಂಕಿ ಇಲ್ಲದ ಅಡುಗೆ, ವೈದಿಕ ಗಣಿತಕಲಿಕೆ ಇದ್ದು, ಪ್ರತಿದಿನ ಸವಿಯಾದ ಜಗನ್ನಾಥ ಪ್ರಸಾದವಿರುತ್ತದೆ ಎಂದರು.
ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಒಂದು ದಿನದ ಪ್ರವಾಸ ಏರ್ಪಡಿಸಲಾಗಿದ್ದು, ಏ.26ರ ಸಂಜೆ 5 ಗಂಟೆಗೆ ಶುಭಮಂಗಳ ಸಮುದಾಯ ಭವನದಲ್ಲಿ ಶಿಬಿರದ ಸಮಾರೋಪ ಸಮಾರಂಭವು ವಿಜೃಂಭಣೆಯಿಂದ ಆಚರಿಸಲಾಗುವುದು. ಈ ಕಾರ್ಯಕ್ರಮಕ್ಕೆ ಮಕ್ಕಳ ಕುಟುಂಬದವರನ್ನು ಆಹ್ವಾನಿಸಲಾಗುತ್ತಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ 9743206075, 8073211757, 8618940181 ರಲ್ಲಿ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಸರಾಜ ಗೋಪಾಲದಾಸ್, ಜನಾರ್ಧನ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















