ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಂಗಳೂರಿನ ಜೈನ್ ಹೆರಿಟೇಜ್ ಶಾಲೆಯಲ್ಲಿ ನಡೆದ ಕಲಾ ವಿಜ್ಞಾನ ಮತ್ತು ಕಲಾ ಉತ್ಸವ 2023ರಲ್ಲಿ ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆ 16 ಚಾಂಪಿಯನ್ಷಿಪ್’ಗಳನ್ನು ಮುಡಿಗೇರಿಸಿಕೊಂಡಿದೆ.
2023ರ `ಕಲಾವಿಜ್ಞಾನ ಮತ್ತು ಕಲಾ ಉತ್ಸವ’ ಕಾರ್ಯಕ್ರಮದಲ್ಲಿ ಬೆಂಗಳೂರಿನ ಜೈನ್ ಹೆರಿಟೇಜ್ ಶಾಲೆಯಲ್ಲಿ ನಡೆದ ಪ್ರತಿಯೊಂದು ಕ್ರಿಯಾಕಲೆಗೂ ಶಿವಮೊಗ್ಗದ ಜೈನ್ ಪಬ್ಲಿಕ್ ಶಾಲೆಯು ಒಟ್ಟು ಚಾಂಪಿಯನ್ಷಿಪ್ ಗಳಿಸಿತು.
ಪ್ರಮುಖವಾಗಿ ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಶಾಲೆಯ ವಿದ್ಯಾರ್ಥಿಗಳು ವಿವಿಧ ಮೌಲ್ಯಕಲೆಗಳಲ್ಲಿ ಹೊಸ ಹೊಸ ಪ್ರದರ್ಶನ ಮಾಡಿದ್ದರು. 20 ಕ್ರಿಯೆಗಳಲ್ಲಿ ಶಿವಮೊಗ್ಗದ ಜೈನ್ ಪಬ್ಲಿಕ್ ಶಾಲೆ 16 ಕ್ರಿಯೆಗಳಲ್ಲಿ ಬಹುಮಾನ ಗಳಿಸಿ ಚಾಂಪಿಯನ್ಷಿಪನ್ನು ತನ್ನದಾಗಿಸಿಕೊಂಡಿದೆ.
Also read: ಜನರ ನಾಡಿ ಮಿಡಿತ ನಮ್ಮ ಪರವಾಗಿದೆ, ಅಪಪ್ರಚಾರದಿಂದ ಯಾರೂ ಹತಾಶರಾಗಬೇಡಿ: ಸಿಎಂ ಕಿವಿಮಾತು
ಶಿವಮೊಗ್ಗ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಜೈನ್ ಪಬ್ಲಿಕ್ ಶಾಲೆ ಸತತ 11ವರ್ಷಗಳಿಂದ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜೈನ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರು, ಈ ಸಾಧನೆ ಹಾಗೂ ಯಶಸ್ಸಿನ ಹಿಂದಿನ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಶ್ರಮದ ಕುರಿತು ತಿಳಿಸಿ, ಧನ್ಯವಾದ ಅರ್ಪಿಸಿದರು.
ಈ ಚಾಂಪಿಯನ್ಶಿಪ್ ಪಡೆಯಲು ಸಹಕರಿಸಿದ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಶಾಲೆಯ ಪ್ರಾಂಶುಪಾಲರು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post