ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಸ್ಲಿಂ ಸಮುದಾಯದ ಕೆಲ ಗೂಂಡಾಗಳಿಗೆ ಸರ್ಕಾರ ಮತ್ತು ಪೊಲೀಸರ ಬಗ್ಗೆ ಭಯ ಇಲ್ಲದಂತಾಗಿದ್ದು, ಹರ್ಷನ ಮನೆ ಮುಂದೆ ಬೆದರಿಕೆ ಒಡ್ಡಿದ ಮತ್ತು ಪ್ರಕಾಶ್ ಎಂಬಾತನ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ಪೊಲೀಸರು ಕೂಡಲೇ ಬೇಧಿಸಬೇಕಿದೆ ಎಂದು ಶಾಸಕ ಈಶ್ವರಪ್ಪ MLA Eshwarappa ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲಾಗಿದೆ. ಆದರೂ ಆ ಸಂಘಟನೆ ಇನ್ನು ಜೀವಂತವಾಗಿದೆಯೇ ಎನ್ನುವುದನ್ನು ಪೊಲೀಸರು ಪತ್ತೆ ಮಾಡಬೇಕಿದೆ. ಹಾಗೂ ಸಮಾಜದಲ್ಲಿ ಅಶಾಂತಿ ವಾತಾವರಣ ಹುಟ್ಟು ಹಾಕುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಾವು ಸಂವಿಧಾನ ಅಡಿಯಲ್ಲಿ ಕೆಲಸ ಮಾಡಬೇಕಿದೆ. ಅವರ ರೀತಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಹೋಗಲು ಸಾಧ್ಯವಿಲ್ಲ. ಈ ರೀತಿ ಗೂಂಡಾಗಿರಿ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎನ್ ಐಎಗೆ ಸಾಕಷ್ಟು ಪ್ರಕರಣಗಳು ಹೋಗಿವೆ. ಪಿಎಫ್ಐ ಸಂಘಟನೆ ನಿಷೇಧ ಆಗಿದೆ. ನಿನ್ನೆ ಬರಮಪ್ಪ ನಗರದಲ್ಲಿ ನಡೆದಿರುವ ಘಟನೆಯನ್ನು ಯಾರು ಮಾಡಿದ್ದಾರೆ ತನಿಖೆಯಿಂದ ಹೊರಗೆ ಬರಬೇಕು. ಪಿಎಫ್ಐ ಅಥವಾ ಗೂಂಡಾಗಳು ಮಾಡಿದ್ದಾರಾ ಎಂದು ಪೊಲೀಸ್ ತನಿಖೆಯಿಂದ ಪತ್ತೆ ಮಾಡಬೇಕಿದೆ ಎಂದರು.
ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿತ್ತು. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸಾವರ್ಕರ್ ಮೊಮ್ಮಗ ಬಂದು ಹೋಗಿದ್ದಾರೆ. ಯಾವುದೇ ಪ್ರಚೋದನಕಾರಿ ಭಾಷಣ ಮಾಡಿಲ್ಲ. ಆದರೂ ಕೆಲವರು ಹೇಡಿಗಳ ರೀತಿಯಂತೆ ನಿನ್ನೆ ಗಲಾಟೆ ಮಾಡಿದ್ದಾರೆ. ಈ ರೀತಿ ಹೇಡಿಗಳಂತೆ ವರ್ತಿಸುವವರಿಗೆ ಪೊಲೀಸರು ಕಾನೂನಿನ ಅಡಿಯಲ್ಲಿ ಸರಿಯಾದ ಪಾಠ ಕಲಿಸಬೇಕಿದೆ ಎಂದರು.
ಗೂಂಡಾಗಿರಿ ಮಾಡುವವರ ವಿರುದ್ಧ ಎನ್ ಕೌಂಟರ್ ಮಾಡಲು ಸಾಧ್ಯವಿಲ್ಲ. ಹರ್ಷ ಸಹೋದರಿ ಅಶ್ವಿನಿ ನೊಂದುಕೊಂಡು ಈ ರೀತಿ ಹೇಳಿಕೆ ನೀಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಕಠಿಣ ಕ್ರಮ ವಹಿಸುತ್ತಾರೆ ಎನ್ನುವ ವಿಶ್ವಾಸ ಇದೆ. ಆದರೆ ಪ್ರಕರಣದ ಬಗ್ಗೆ ಗೂಂಡಾಗಳಿಗೆ ಇನ್ನೂ ಬುದ್ದಿ ಬಂದಿಲ್ಲವೆಂಬುದು ಈ ಘಟನೆಗಳಿಂದ ಮತ್ತೆ ಸ್ಪಷ್ಟವಾಗುತ್ತಿದೆ ಎಂದರು.
ಈ ಘಟನೆಯನ್ನ ಯಾವ ಪಕ್ಷಗಳು ಖಂಡಿಸದೆ ಇರುವುದು ಸಹ ದುರದೃಷ್ಟಕರ ಸಂಗತಿ ಸರಿ. ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಇದನ್ನ ಖಂಡಿಸದಿದ್ದರೆ ಸಂದೇಶ ಬೇರೆ ತರಹ ಹೋಗುತ್ತದೆ. ಇದನ್ನೇ ಕೆಲವು ಮುಸ್ಲಿಂರು ದುರ್ಬಳಕೆ ಮಾಡಿಕೊಂಡಂತಾಗುತ್ತದೆ. ಇದರಲ್ಲಿ ಯಾರು ಕೂಡ ರಾಜಕೀಯ ಮಾಡಬಾರದು. ಘಟನೆಯನ್ನು ಪ್ರತಿಯೊಬ್ಬರು ಖಂಡಿಸಬೇಕು. ಮುಸ್ಲಿಂ ಗೂಂಡಾಗಳಿಗೆ ಬುದ್ಧಿ ಹೇಳಬೇಕಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post