ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಂಚಾಯತ್ ರಾಜ್ ಇಲಾಖೆ ಭಾರತ ಸರ್ಕಾರ, ಕಮ್ಯುನಿಟಿ ರೇಡಿಯೋ ಅಸೋಸಿಯೇಷನ್, ರೇಡಿಯೋ ಶಿವಮೊಗ್ಗ #Radio Shivamogga ಸಹಯೋಗದಲ್ಲಿ ರೂಪಿಸಿರುವ ಸರಣಿ ಕಾರ್ಯಕ್ರಮ ಜನತಾ ಜಾಗೃತಿ ಯಲ್ಲಿ ಈ ಬಾರಿ ಅಧ್ಯಕ್ಷೆಯದ್ದೇ ಅಧಿಕಾರ, ಪತಿಯದ್ದಲ್ಲ ಸಂಚಿಕೆ ಪ್ರಸಾರವಾಗಲಿದೆ.
ಆ.22ರಂದು ಮಧ್ಯಾಹ್ನ 3 ಗಂಟೆಗೆ ಇದು ಪ್ರಸಾರವಾಗಲಿದೆ. ಇದರ ಮರು ಪ್ರಸಾರ ಆ. 24ರಂದು ಮಧ್ಯಾಹ್ನ 3 ಗಂಟೆಗೆ ಇರಲಿದೆ. ಇದು ಸರ್ವರೂ ಅರಿಯಬೇಕಾದ್ದ ಕಾರ್ಯಕ್ರಮವಾಗಿದೆ. ಎಲ್ಲರೂ ಆಲಿಸಿ, ಕಾರ್ಯಕ್ರಮದ ಕುರಿತಾಗಿ ಪ್ರತಿಸ್ಪಂದಿಸಲು 96860 96279ಕ್ಕೆ ವಾಟ್ಸಪ್ ಮಾಡಬಹುದಾಗಿದೆ.
Also read: ಪರಿಸ್ಥಿತಿ ಬಂದರೆ ಹೆಚ್ ಡಿ. ಕುಮಾರಸ್ವಾಮಿಯನ್ನು ಮುಲಾಜಿಲ್ಲದೆ ಬಂಧಿಸುತ್ತೇವೆ: ಸಿಎಂ
ಜನತಾ ಜಾಗೃತಿ ಇದು ಸುಸ್ಥಿರ ಗ್ರಾಮ ಪಂಚಾಯ್ತಿಯನ್ನು ರೂಪಿಸುವ ವಿಧಾನವನ್ನು ತಿಳಿಸುವ ಸರಣಿಯಾಗಿದೆ. ಇದರಲ್ಲಿ ಸ್ಥಳೀಯ ಆದಾಯ ಮೂಲಗಳ ಅಭಿವೃದ್ಧಿ, ಎದುರಾಗುವ ಸವಾಲುಗಳು, ಅವುಗಳನ್ನು ಪರಿಹರಿಸಲು ತೆಗೆದುಕೊಳ್ಳಬೇಕಾದ ಮಾರ್ಗಗಳ ಕುರಿತು ಮಾಹಿತಿ ಇರುತ್ತದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆರೋಗ್ಯ, ಶಿಕ್ಷಣ ಇತ್ಯಾದಿಗಳ ಸಮಪರ್ಕ ನಿರ್ಹಣೆಯಿಂದ ಹೇಗೆ ಮಾದರಿಯಾದ ವ್ಯವಸ್ಥೆಯನ್ನು ರೂಪಿಸಲು ಸಾಧ್ಯ ಎಂಬುದನ್ನು ಮನಗಾಣಿಸಲಾಗುತ್ತದೆ. ಈ ಸರಣಿಯ ಸಂಚಿಕೆಗಳು ಸಾಮಾನ್ಯವಾಗಿ ಬಾನುಲಿ ರಂಗರೂಪ, ಚರ್ಚೆ, ಮಾತು ಈ ರೂಪದಲ್ಲಿರುತ್ತವೆ.
ಈ ಸರಣಿಯ ಮೊದಲ ಕಾರ್ಯಕ್ರಮ ಆದಾಯದ ಸ್ವ ಮೂಲಗಳು ಆ.15ರಂದು ಬೆಳಗ್ಗೆ 7:45ಕ್ಕೆ ಹಾಗೂ ಇದರ ಮರು ಪ್ರಸಾರ ಆ.17ರಂದು ನಡೆದಿತ್ತು. ಈ ಸರಣೀ ಕಾರ್ಯಕ್ರಮಕ್ಕೆ ಪರಿಸರ ಅಧ್ಯಯನ ಕೇಂದ್ರ ಹಾಗೂ ಕೊಡಚಾದ್ರಿ ಇಂಟಿಗ್ರೆಟೆಡ್ ಡೆವೆಲೆಪ್ ಮೆಂಟ್ ಸೊಸೈಟಿ (ಕಿಡ್ಸ್ )ಸಹಕಾರವಿದೆ. ರೇಡಿಯೋ ಶಿವಮೊಗ್ಗ ಆಪ್ ಮೊಬೈಲ್ ನಲ್ಲಿನ ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್ ನಲ್ಲಿ ಲಭ್ಯವಿದೆ. ಇದನ್ನು ಡೌನ್ ಲೋಡ್ ಮಾಡಿಕೊಂಡು ದಿನದ 24 ಗಂಟೆಯೂ ಪ್ರಸಾರವಾಗುವ ಎಲ್ಲ ಕಾರ್ಯಕ್ರಮಗಳನ್ನು ಆಲಿಸಬಹುದೆಂದು ನಿಲಯನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post