ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಅಯೋಧ್ಯೆ |
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ನೇತೃತ್ವದಲ್ಲಿ 1500 ಮಂದಿಯ ಅಯೋಧ್ಯೆ ಹಾಗೂ ಕಾಶಿ ಯಾತ್ರೆ ಅದ್ದೂರಿಯಾಗಿ ನಡೆದಿದ್ದು, ಅಚ್ಚುಕಟ್ಟಾದ ವ್ಯವಸ್ಥೆಗೆ ಯಾತ್ರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕೆ.ಎಸ್. ಈಶ್ವರಪ್ಪ ಅವರು ಅಯೋಧ್ಯ #Ayodhya ಬಾಲ ರಾಮನ ಹಾಗೂ ಕಾಶಿ ವಿಶ್ವನಾಥನ #Kashi Vishwanatha ದೇವರ ದರ್ಶನ ಪಡೆಯಲು ಒಂದು ವಿಶೇಷ ರೈಲಿನಲ್ಲಿ ಸುಮಾರು 1500 ಭಕ್ತಾದಿಗಳನ್ನು ಹಾಗೂ ಅವರ ಕುಟುಂಬ ವರ್ಗದರೂ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಸಹ ಈ ವಿಶೇಷ ದೇವರ ದರ್ಶನಕ್ಕೆ ಜೊತೆಗೂಡಿ ತೆರಳಿದ್ದಾರೆ.

Also read: ಬೆಂಗಳೂರು: ಪುರಂದರದಾಸರ ನವರತ್ನ ಮಾಲಿಕೆ ಗೋಷ್ಠಿ ಗಾಯನ ಸಂಪನ್ನ
ಈ ಸಂದರ್ಭದಲ್ಲಿ ಭಕ್ತಾದಿಗಳು ನಮಗೆ ಯಾವುದೇ ಕೊರತೆ ಇಲ್ಲ, ನಾವು ನಮ್ಮ ಮನೆಯಲ್ಲಿ ಅಡುಗೆ ಮಾಡಿದಂತಹ ಊಟ ನಮಗೆ ಇಲ್ಲಿ ಸಿಗುತ್ತಿದೆ. ರೈಲಿನಲ್ಲಿ ಹಾಸಿಗೆ ವ್ಯವಸ್ಥೆಯಾಗಲಿ, ನೀರಿನ ವ್ಯವಸ್ಥೆಯಾಗಲಿ ಅಚ್ಚುಕಟ್ಟಾಗಿ ನೆರವೇರಿಸಿದ್ದೀರಿ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೆ.ಈ. ಕಾಂತೇಶ್ ಸಹ ತಂದೆಯಂತೆ ಮಗನೆಂದು ರೈಲಿನಲ್ಲಿ ಪ್ರವಾಸ ಮಾಡುತ್ತಿರುವ ಭಕ್ತಾದಿಗಳಿಗೆ ಆರೋಗ್ಯ ಹಾಗೂ ಊಟ ಉಪಚಾರಗಳ ಬಗ್ಗೆ ವಿಚಾರಿಸಿದರು.

ಇನ್ನು, ವಿಶೇಷ ರೈಲು ಇಂದು ಅಯೋಧ್ಯೆ ತಲುಪಿದ್ದು, ಅಲ್ಲಿನ ಭಕ್ತರು ಈಶ್ವರಪ್ಪಯವರಿಗೆ ವಿಶೇಷವಾಗಿ ಆರತಿ ಮಾಡಿ, ಸಿಹಿ ತಿನ್ನಿಸಿ ಸ್ವಾಗತಿಸಿದರು. ಇವರೊಂದಿಗೆ ತೆರಳಿದ್ದ ಎಲ್ಲ ಯಾತ್ರಿಗಳನ್ನೂ ಸಹ ವಿಶೇಷವಾಗಿ ಸ್ವಾಗತಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post