ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಾದಜ್ಯೋತಿ ಸಂಗೀತ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಪುರಂದರದಾಸರ #Purandaradasaru ನವರತ್ನ ಮಾಲಿಕೆ ಗೋಷ್ಠಿ ಗಾಯನ ಯಶಸ್ವಿಯಾಗಿ ಸಂಪನ್ನಗೊಂಡಿತು.
ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮಮಂದಿರದಲ್ಲಿ ಆಯೋಜಿಸಲಾಗಿತ್ತು.
ಕಳೆದ ಐದು ದಿನಗಳಿಂದ ನಡೆಸುತ್ತಿರುವ ಹರಿದಾಸ ಸಂಭ್ರಮ ಕೊನೆಯ ದಿನವಾದ ಭಾನುವಾರ ಸಂಜೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲಿಗೆ ಹರಿದಾಸರು ಕಂಡ ಶ್ರೀಕೃಷ್ಣ ಶೀರ್ಷಿಕೆಯಲ್ಲಿ ವಿದ್ವಾನ್ ಶರತ್ ಆರ್. ರಾವ್ ಗಾಯನಕ್ಕೆ ಡಾ.ವಿನಾಯಕಾರ್ಚಾ ವ್ಯಾಖ್ಯಾನ ಮಾಡಿದರು.
ಶ್ರೀ ಪುರಂದರದಾಸರ ನವರತ್ನ ಮಾಲಿಕೆ ಗೋಷ್ಠಿ ಗಾಯನವನ್ನು ವಿದುಷಿ ಶ್ರೀಮತಿ ಸಂಧ್ಯಾ ಶ್ರೀನಾಥ್, ವಿದುಷಿ ಶ್ರೀಮತಿ ಸುಮಲತಾ ಮಂಜುನಾಥ್ ಮತ್ತು ಅವರ ಶಿಷ್ಯ ವೃಂದದವರು ಪ್ರಸ್ತುತ ಪಡಿಸಿದರು. ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ಕು.ಚಂದ್ರಲಾ ಕಟ್ಟೆ, ಮೃದಂಗ ವಾದನದಲ್ಲಿ ಶ್ರೀನಿವಾಸ್ ಅನಂತರಾಮಯ್ಯ ಸಾಥ್ ನೀಡಿದರು ಎಂದು ಸಂಸ್ಥೆಯ ಪದಾಧಿಕಾರಿ ಕಟ್ಟೆ ಸತ್ಯನಾರಾಯಣ ತಿಳಿಸಿದರು.
Also read: ಗೂಗಲ್ ಮ್ಯಾಪ್ ಎಡವಟ್ಟು: ನಂಬಿ ಹೊರಟ ಕಾರು ಬಿದ್ದಿದ್ದು ಎಲ್ಲಿ ನೋಡಿ | ಮೂವರ ಸಾವು
ಮಹಾಭಾರತ ತಾತ್ಪರ್ಯ ನಿರ್ಣಯ (ಧಾರ್ಮಿಕ ಪ್ರವಚನ)
ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ನ. 25ರಿಂದ ಡಿ.3ರವರೆಗೂ ಪ್ರತಿದಿನ ಸಂಜೆ 7 ಗಂಟೆಗೆ ಡಾ.ಬಿ. ಜಗನ್ನಾಥಾಚಾರ್ಯ ಅವರಿಂದ ಮಹಾಭಾರತ ತಾತ್ಪರ್ಯ ನಿರ್ಣಯ ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ.
ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಬೆಂಗಳೂರು-560003
ಮಹಾಭಾರತ ಪ್ರವಚನ ಮಾಲಿಕೆ – 4
ಪೂರ್ಣಪ್ರಜ್ಞ ಪ್ರತಿಷ್ಠಾನದ ವತಿಯಿಂದ ನ.25 ರಿಂದ ಡಿ.1ರವರೆಗೆ ಪ್ರತಿದಿನ ಸಂಜೆ 6-30ಕ್ಕೆ ‘ಕನಕಶ್ರೀ ಪ್ರಶಸ್ತಿ’ ಪುರಸ್ಕೃತ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರಿಂದ ಮಹಾಭಾರತ ಪ್ರವಚನ ಮಾಲಿಕೆ – 4 ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ.
ಸ್ಥಳ: ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ ಮುಖ್ಯರಸ್ತೆ, ಬೆಂಗಳೂರು-560024
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post