ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ (ಬಿ.ಆರ್.ಪ್ರಾಜೆಕ್ಟ್) |
ಯಾವುದೇ ಸಮಾಜಮುಖಿ ಯೋಜನೆಗಳ ಅನುಷ್ಟಾನ ಮತ್ತು ನಿರ್ವಹಣೆಯ ಯಶಸ್ಸಿಗೆ ಪ್ರಾದೇಶಿಕ ಶಕ್ತಿ ಕಾಳಜಿಯ ಸಹಭಾಗಿತ್ವ ಅತ್ಯವಶ್ಯಕ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣ ರಾವ್ ಅಭಿಪ್ರಾಯಪಟ್ಟರು.
ಸೋಮವಾರ ನಗರದ ಎನ್ಇಎಸ್ ಸಂಸ್ಥೆ ಹಾಗೂ ರೋಟರಿ ಕ್ಲಬ್ ವತಿಯಿಂದ ರೋಟರಿ ಜಾಗತಿಕ ಅನುದಾನದಲ್ಲಿ ನವೀಕರಣಗೊಂಡಿರುವ ಬಿ.ಆರ್.ಪ್ರಾಜೆಕ್ಟ್ ರಾಷ್ಟ್ರೀಯ ಸಂಯುಕ್ತ ಪದವಿಪೂರ್ವ ಕಾಲೇಜನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಸಹಕಾರ ಕ್ಷೇತ್ರಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶದ ಅಭ್ಯುದಯ ಸಾಧ್ಯ. ಪುಸ್ತಕ ಮಾತ್ರ ಅಕ್ಷರವಲ್ಲ ನಮ್ಮ ಮಾತು ಕೂಡ ಅಕ್ಷರವೆ ಆಗಿದೆ. ಉತ್ತಮ ವ್ಯಕ್ತಿತ್ವ ಮಾತ್ರ ಜೀವನದಲ್ಲಿ ಅಗ್ರಸ್ಥಾನ ಪಡೆಯಲು ಸಾಧ್ಯವಾಗಲಿದ್ದು, ವ್ಯಕ್ತಿತ್ವಗಳ ನಿಜವಾದ ನಿರೂಪಣೆ ನಡೆಯುವುದು ಶಾಲೆಗಳಲ್ಲಿ ಮಾತ್ರ. ನಿಮ್ಮನ್ನು ಹಿಯಾಳಿಸಿದ ಜನಗಳಿಗೆ ಬೆರಳು ಮಾಡಿ ತೋರಿಸುವುದಕ್ಕಿಂತ, ಬದುಕಿನಲ್ಲಿ ಯಶಸ್ವಿಯಾಗಿ ಬೆಳೆದು ತೋರಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Also read: ಭೀಕರ ಅಪಘಾತ | ಕುಂಭಮೇಳಕ್ಕೆ ತೆರಳಿದ್ದ ಗೋಕಾಕ್‌ನ ಆರು ಮಂದಿ ಸಾವು
ಭದ್ರಾವತಿ ಬಿಇಓ ನಾಗೇಂದ್ರಪ್ಪ ಮಾತನಾಡಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದರು ಕೂಡ, ಅಂತಹ ಶಾಲೆಗಳನ್ನು ಉನ್ನತಿಕರಣಗೊಳಿಸುವಲ್ಲಿ ರೋಟರಿ ಹಾಗೂ ಎನ್ಇಎಸ್ ನಂತಹ ಅನೇಕ ಸಂಘ ಸಂಸ್ಥೆಗಳ ಕಾಳಜಿ ಕಾರಣ. ಸ್ವಾತಂತ್ರ್ಯ ಪೂರ್ವದಲ್ಲಿಯೆ ಎನ್ಇಎಸ್ ಸಂಸ್ಥೆ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಿ, ಇಂದಿನವರೆಗೂ ಮುನ್ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಬಿ.ಆರ್.ಪಿ ಕಾಲೇಜನ್ನು ನವೀಕರಣಗೊಳಿಸಲು ರೋಟರಿಯಿಂದ ಬಂದಿರುವ ಜಾಗತಿಕ ಅನುದಾನವು ಅಮೇರಿಕಾದ ವೆಸ್ಟ್ ಸ್ಪ್ರಿಂಗ್ ಫೀಲ್ಡ್ ರೋಟರಿ ಕ್ಲಬ್ ನಿಂದ ಬಂದಿದ್ದು, ಶಿವಮೊಗ್ಗ ರೋಟರಿಯ ಮೂಲಕ ಜಿಲ್ಲೆಯ ಬಿ.ಆರ್.ಪ್ರಾಜೆಕ್ಟ್ ತಲುಪಿದೆ. ರೋಟರಿಯ ಜಾಗತಿಕ ಅನುದಾನದ ಜೊತೆಗೆ ಎನ್ಇಎಸ್ ಸಂಸ್ಥೆ ಜಂಟಿಯಾಗಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಂಯುಕ್ತ ಕಾಲೇಜನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ತಿಳಿಸಿದರು.
ವಿದ್ಯಾಸಂಸ್ಥೆಯ ಕಟ್ಟಡವನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ನವೀಕೃತ ಶೌಚಾಲಯಗಳು, ಪೀಠೋಪಕರಣಗಳು ಹಾಗೂ ಕಂಪ್ಯೂಟರ್ ಲ್ಯಾಬ್ ರೂಪಿಸಲಾಗಿದೆ. ಅಂದಿನ ಕೆಪಿಟಿಸಿಎಲ್ ಅಧಿಕಾರಿಗಳ ಮನವಿ ಮೇರೆಗೆ ಎನ್ಇಎಸ್ ಸಂಸ್ಥೆಯಿಂದ 1962 ರಲ್ಲಿ ಪ್ರಾರಂಭಗೊಂಡ ಶಾಲೆಯು ನಂತರ 1983 ರಲ್ಲಿ ಪಿಯು ಕಾಲೇಜಿನೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಈ ಭಾಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಪ್ರೇರಣೀಯ ವಾತಾವರಣ ನಿರ್ಮಾಣ ಮಾಡಿಕೊಟ್ಟಿದೆ ಎಂದು ಹೇಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post