ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭ್ರಷ್ಟಾಚಾರದ ವಿರುದ್ಧ ಭ್ರಷ್ಟಾಚಾರಿಗಳೇ ಬಂದ್ ಕರೆ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹರಿಹಾಯ್ದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರು ನಮ್ಮ ಪ್ರಣಾಳಿಕೆ ಬಗ್ಗೆ ಆರೋಪ ಮಾಡುತ್ತಾರೆರ. ಆದರೆ ಈಗಾಗಲೇ ನಾವು ಅದರಲ್ಲಿ ಶೇ. 99 ರಷ್ಟು ಈಡೇರಿಸಿದ್ದೇವೆ. ನಾವು ಹೇಳಿದ್ದಕ್ಕಿಂತಲೂ ಹೆಚ್ಚೇ ಮಾಡಿದ್ದೇವೆ. ಕಾಂಗ್ರೆಸ್ನವರು ಚುನಾವಣೆ ಹತ್ತಿರದಲ್ಲಿ ಇರುವುದರಿಂದ ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನ ಎರಡು ಗಂಟೆ ಬಂದ್ ಕರೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಬಂದ್ ಕರೆ ಕಟ್ಟಿರೋದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ. ಆದರೆ ಇವರೇ ಭ್ರಷ್ಟಾಚಾರ ಮಾಡಿರುವವರು. ಇವರೇ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಈಗ ಬೇಲ್ ಮೇಲೆ ಇದ್ದಾರೆ. ಹೀಗಿರುವಾಗ ಬಿಜೆಪಿ ಕುರಿತು ಹೇಳಿಕೆ ನೀಡುವ ನೈತಿಕತೆ ಅವರಿಗಿಲ್ಲ. ಅರ್ಕಾವತಿ ವಿಚಾರದಲ್ಲಿ ಇವರು ಆರೋಪಿಯಾಗಿದ್ದಾರೆ. ಕಳ್ಳನೇ, ಈಗ ಕಳ್ಳ, ಕಳ್ಳ ಎಂದು ಕೂಗುವಂತಾಗಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಭ್ರಷ್ಟಾಚಾರ ಮಾಡಿದೆ ಎಂದು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಆದರೆ, ಈವರೆಗೂ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ನವರು ಬರೀ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಬಂದ್ ಕರೆ ಕೊಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಡಿಕೆಶಿ ಮನೆಯಲ್ಲಿ ಕೋಟಿಗಟ್ಟಲೆ ಹಣ ಸಿಕ್ಕಿತು. ದೆಹಲಿ ಮನೆಯಲ್ಲಿಯಲ್ಲಿ ಹಣಸಿಕ್ತು. ಇವೆಲ್ಲಾ ಯಾವ ಹಣ ಹಾಗಾಗದರೆ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅರ್ಕಾವತಿ ಯೋಜನೆಯಲ್ಲಿ ಹಣ ಲೂಟಿಯಾಗಿದೆ ಎಂದು ಕೆಂಪಯ್ಯ ವರದಿ ಮಾಡಿದ್ದಾರೆ. ಇವೆಲ್ಲಾ ಏನು ಹಾಗಾದರೆ ಎಂದು ಗುಡುಗಿದರು.
ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಸಿದ ಈಶ್ವರಪ್ಪ, ಒಂದೇ ಒಂದು ಹೆಸರು ಹೇಳಲಿ ನೋಡೋಣ. ಈವರೆಗೂ ಒಬ್ಬರೂ ಕೂಡ ಕಾಂಗ್ರೆಸ್ ಗೆ ಹೋಗಿಲ್ಲ. ಮತ್ತೆ ಕಾಂಗ್ರೆಸ್ ನವರು ಸುಳ್ಳು ಹೇಳುತ್ತಿದ್ದಾರೆ. ಸತ್ತೋಗುತ್ತಿರುವ ಪಾರ್ಟಿಗೆ ಯಾರಾದರೂ ಸೇರ್ತಾರೇನ್ರಿ ? ಸ್ವಾರ್ಥಿಗಳು ಆಡುವ ಮಾತು ಇದು. ಕಾಂಗ್ರೆಸ್ ನವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಯಾರೂ ಬಿಜೆಪಿಯಿಂದ ಹೋಗಲ್ಲ. ನಾರಾಯಣ್ಣ ಗೌಡ, ಸೋಮಣ್ಣ ಕಾಂಗ್ರೆಸ್ ಗೆ ಹೋಗುವ ವಿಚಾರವನ್ನಕಾಂಗ್ರೆಸ್ ವದಂತಿ ಹಬ್ಬಿಸುತ್ತಿದೆ. ಡಿಕೆಶಿ ಸಿಎಂ ಆಗ್ತಾರೆಎಂಬ ಹಪಾಪಿಯಿಂದ ಓಡಾಡುತ್ತಾರೆ. ಸತ್ತು ಹೋದ ಪಕ್ಷಕ್ಕೆ ಸೇರಿಕೊಳ್ತಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಡಾಳ್ ವಿರುಪಾಕ್ಷಪ್ಪ ಭ್ರಷ್ಟಾಚಾರ ವಿಚಾರ ಕುರಿತು ಪ್ರತಿಕ್ರಿಸಿದ ಈಶ್ವರಪ್ಪ, ಅವರೇ ಹೇಳಿದ್ದಾರೆ ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. ಈಗಲೇ ಈ ಬಗ್ಗೆ ಏನು ಹೇಳಲು ಆಗುವುದಿಲ್ಲ. ತನಿಖೆ ನಡೆಯುತ್ತಿದೆ. ಕೋರ್ಟ್ ಗೆ ಎಲ್ಲಾ ವಿವರವನ್ನು ವಿರುಪಾಕ್ಷಪ್ಪ ನೀಡಿದ್ದಾರೆ. ಉಪ್ಪು ತಿಂದವರು ನೀರು ಕುಡಿದೆ ಕುಡಿಯುತ್ತಾರೆ ಎಂದು ಹೇಳಿದರು.

ನಾಲ್ಕಾರು ಜನರಿಗೆ ಬಿಟ್ಟು ಟಿಕೆಟ್ ಹಂಚಿಕೆ ಎಂದು ಯಡಿಯೂರಪ್ಪ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ನಾಲ್ಕಾರು ಜನರು ಎಂದು ಹೇಳಿದ್ದಾರೆ. ಯಾರಿಗೆ ಟಿಕೆಟ್ ಇಲ್ಲ ಎಂದು ಅವರು ಹೇಳಿಲ್ಲ. ಅವರು ಯಾರಾದರೂ ಆಗಿರಬಹುದು. ಯಡಿಯೂರಪ್ಪ ಅವರು ಕೇಂದ್ರದ ಸಮಿತಿಯಲ್ಲಿದ್ದಾರೆ. ಅವರ ತಲೆಯಲ್ಲಿ ಏನೇನಿದಿಯೋ ನಮಗೆ ಗೊತ್ತಾಗಲ್ಲ. ಯಡಿಯೂರಪ್ಪ ಸೇರಿದಂತೆ ಪಕ್ಷದ ವರಿಷ್ಠರು ಈ ಬಗ್ಗೆ ಆಲೋಚಿಸುತ್ತಾರೆ. ನನಗೆ ಟಿಕೆಟ್ ಬಗ್ಗೆ ಪಕ್ಷದ ವರಿಷ್ಠರ ನಿರ್ಧಾದಂತೆ ನಾನು ಮುಂದುವರೆಯುತ್ತೇನೆ ಎಂದರು.
ಮಾಜಿ ಸಿಎಂ ಸಿದ್ಧರಾಮಯ್ಯ ಮಿಮಿಕ್ರಿ ಆರ್ಟಿಸ್ಟ್ ಎಂದು ವ್ಯಂಗ್ಯವಾಡಿದ ಈಶ್ವರಪ್ಪ, ನಳೀನ್ ಕುಮಾರ್ ಕಟೀಲ್, ನರೇಂದ್ರ ಮೋದಿ ಬಗ್ಗೆ ವ್ಯಂಗ್ಯವಾಡುತ್ತಾರೆ. ಭಾಯಿಯೋ ಔರ್ ಬೆಹೆನೋ ಎನ್ನುತ್ತಾರೆ. ಅವರು ಕೇವಲ ಟೀಕೆ ಮಾಡಿಕೊಂಡಿರಲಿ. ಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















