ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಬೆಂಗಳೂರು |
ವೀಡಿಯೋ ಪ್ರಕರಣದ ಹಿನ್ನೆಲೆಯಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ #Prajwal Revanna ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.
ಈ ಕುರಿತಂತೆ ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, #H D Kumaraswamy ಪ್ರಜ್ವಲ್ ರೇವಣ್ಣ ಅವರ ವಿರುದ್ದ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಎಚ್.ಡಿ. ದೇವೇಗೌಡರೊಂದಿಗೆ ನಿನ್ನೆಯೇ ಚರ್ಚೆ ಮಾಡಲಾಗಿತ್ತು. ಇದರಂತೆ ಪ್ರಜ್ವಲ್ ಅವರನ್ನು ದೇವೇಗೌಡರು ಉಚ್ಚಾಟನೆ ಮಾಡಿದ್ದಾರೆ ಎಂದರು.

Also read: ಚಿತ್ರದುರ್ಗ: ಭೋವಿ ಗುರು ಪೀಠಕ್ಕೆ ಗೀತಾ ಶಿವರಾಜಕುಮಾರ ಭೇಟಿ
ಪ್ರಕರಣದ ಗಂಭೀರತೆ ಅರಿತ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸ್ವತಃ ತಮ್ಮ ಮೊಮ್ಮಗನನ್ನೇ ಪಕ್ಷದಿಂದ ಉಚ್ಛಾಟನೆ ಮಾಡಲು ಆದೇಶಿಸಿದ್ದರು.

ನಾವು ಒಟ್ಟು ಕುಟುಂಬದಲ್ಲಿ ಇಲ್ಲ. ಈ ವಿಚಾರವನ್ನು ದೇವೇಗೌಡರ ಕುಟುಂಬಕ್ಕೆ ಸೇರಿಸಬೇಡಿ. ರೇವಣ್ಣ, ಅವರ ಪತ್ನಿ ಅವರ ಇಬ್ಬರು ಮಕ್ಕಳು ಬೇರೆ ಇರುತ್ತಾರೆ. ಯುವಕರು ಎಲ್ಲಿಗೆ ಹೋಗುತ್ತಾರೆಂದು ನಮಗೆ ಗೊತ್ತಿರಲ್ಲ. ಅವರು ನಮಗೆ ಹೇಳಿ ಎಲ್ಲೂ ಹೋಗಲ್ಲ. ಯಾರು ಏನು ಮಾಡ್ತಾರೆ ಎಂಬುದು ನಮಗೆ ಗೊತ್ತಿರಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post