ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಬೆಂಗಳೂರು |
ಇಂದಿನ ಕಾಲದ ಪೋಷಕರಿಗೆ ತಮ್ಮ ಮಕ್ಕಳ ವಿಚಾರದಲ್ಲಿ ಕಾಡುತ್ತಿರುವ ಸಾಮಾನ್ಯ ಸಮಸ್ಯೆಗಳಾದ ಟಿವಿ, ಮೊಬೈಲ್’ಗಳಿಂದ #TV, Mobile Addiction ಹಾಗೂ ದುಶ್ಚಟಗಳಿಂದ ದೂರವಿರಿಸುವುದು ಹೇಗೆ ಎಂಬ ಬಗ್ಗೆ ಮಕ್ಕಳ ತಜ್ಞರೂ ಆಗಿರುವ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ #Dr. Dhananjaya Sarji ಅವರು ಅದ್ಭುತ ಸಲಹೆಗಳನ್ನು ನೀಡಿದ್ದಾರೆ.
155ನೇ ವಿಧಾನಪರಿಷತ್ ಕಲಾಪದಲ್ಲಿ ಶಾಲಾ ಕಾಲೇಜುಗಳಲ್ಲಿ ಜಾರಿಗೆ ತರಬೇಕಾದ ನಿಯಮಗಳು ಹಾಗು ಪೋಷಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.
ಮಕ್ಕಳಲ್ಲಿ ಟಿ.ವಿ ಮೊಬೈಲ್ ದೂರವಿರಿಸುವುದು ಹೇಗೆ?
ಮಕ್ಕಳಲ್ಲಿ ಹೆಚ್ಚುತ್ತಿರುವ ಟಿ.ವಿ ಮೊಬೈಲ್ ದುಶ್ಚಟದಿಂದ ಹೊರಬರಬೇಕಾದರೆ ಮೊದಲು ಪೋಷಕರು ಮಕ್ಕಳ ಎದುರು ಟಿ.ವಿ ನೋಡುವುದು, ಮೊಬೈಲ್ ಬಳುಸುವುದು ಕಡಿಮೆ ಮಾಡಬೇಕು, ಯಾಕೆಂದರೆ ಮಕ್ಕಳು ಪೋಷಕರು ಮಾಡುವುದನ್ನು ನೋಡಿ ಕಲಿಯುವುದು ಹೆಚ್ಚು, ಇನ್ನೊಂದು ಪುಸ್ತಕಗಳನ್ನು ಓದುವುದನ್ನು ಕಲಿಸಬೇಕು 30 ಪುಟ ಓದ್ದಿರೇ ಅವರ ಇಷ್ಟವಾದ ವಸ್ತುವನ್ನು ಕೊಡಿಸುವುದಾಗಿ ತಿಳಿಸಬೇಕು, ದಿನದಲ್ಲಿ ಎಷ್ಟು ಬಾರಿ ಮೊಬೈಲ್ ಬಳುಸತ್ತಾರೆ ಅನ್ನುವುದನ್ನು ಗಮನಿಸಬೇಕು ಎಂದು ಹೇಳಿದರು.
Also read: ಮಕ್ಕಳ ಮೆಮೊರಿ ಹೆಚ್ಚಿಸುವುದು ಹೇಗೆ? ಪ್ರತಿ ಪೋಷಕರೂ MLC ಡಾ.ಸರ್ಜಿ ಅವರ ಅದ್ಭುತ ಸಲಹೆ ಏನು?
ಮಕ್ಕಳನ್ನು ದುಶ್ಚಟದಿಂದ ದೂರವಿರಿಸುವುದು ಹೇಗೆ?
ಹದಿಹರೆಯದ ಮಕ್ಕಳು ಬೀಡಿ, ಸಿಗರೇಟ್, ತಂಬಾಕು ಉತ್ಪನ್ನಗಳನ್ನು ಕಲಿಯುತ್ತಿದ್ದಂತೆ. ಇಂತಹ ಮಕ್ಕಳನ್ನು ಗುರುತಿಸಿ ಪ್ರತಿದಿನ ಡಾಕ್ಯುಮೆಂಟ್ ಬರೆಯುವ ಅಭ್ಯಾಸವನ್ನು ಶಾಲೆಗಳಲ್ಲಿ ರೂಢಿಗೆ ತರಬೇಕು, ದಿನಕ್ಕೆ ಒಂದು ನೀತಿಕಥೆಗಳನ್ನು ಓದುವ ಅಥವಾ ಹೇಳುವ ಅಭ್ಯಾಸವನ್ನು ಬೆಳಸಬೇಕು,
ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಮತ್ತು ಪೋಷಕರಿಗೆ ಸೈಕಲಾಜಿಕಲ್ ಕೌನ್ಸಲಿಂಗ್, ಮಕ್ಕಳ ಸಮಾಲೋಚನೆ, ಸ್ತಿçà ರೋಗ ತಜರಿಂದ ಸಮಾಲೋಚನೆಯನ್ನು ಶಿP್ಷÀಣ ಇಲಾಖೆಯಿಂದ ನಡೆಸಬೇಕು ಎಂದು ಹೇಳಿದರು.
ಇವುಗಳನ್ನು ಶಾಲಾ-ಕಾಲೇಜುಗಳಲ್ಲಿ ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಮಕ್ಕಳಿಗೆ ಪ್ರಾರ್ಥನೆ ಮಾಡುವುದನ್ನು ಕಲಿಸಬೇಕು
ಮಕ್ಕಳಿಗೆ ದಿನನಿತ್ಯ ಪ್ರಾರ್ಥನೆ ಮಾಡುವುದನ್ನು ಅಭ್ಯಾಸ ಮಾಡಿಸಬೇಕು, ಯಾಕೆ ಪ್ರಾರ್ಥನೆ ಮಾಡಿಸಬೇಕು ನಮ್ಮಲ್ಲಿ ಕಾನ್ಷಿಯಸ್ ಬ್ರೈನ್ ಮತ್ತು ಸಬ್ ಕಾನ್ಷಿಯಸ್ ಬ್ರೈನ್ ಸಬ್ ಕಾನ್ಷಿಯಸ್ ಬ್ರೈನ್ ಅತ್ಯಂತ ಪರ್ವ ಫುಲ್ ಬ್ರೈನ್ ದಿನದ ಚಟುವಟಿಕೆಗಳಲ್ಲಿ ಶೇ. 95 ರಷ್ಟು ಕೆಲಸ ಮಾಡುವುದು ಸಬ್ ಕಾನ್ಷಿಯಸ್ ಬ್ರೈನ್, ನಾವು ಪ್ರಾರ್ಥನೆ ಮಾಡುವುದು ಕೂಡ ಸಬ್ ಕಾನ್ಷಿಯಸ್ ಬ್ರೈನ್’ನಿಂದ ಹಾಗಾಗಿ ಮಕ್ಕಳಿಗೆ ಪ್ರಾರ್ಥನೆ ಮಾಡುವುದು ಕೂಡ ಅಭ್ಯಾಸ ಮಾಡುವುದು ಮುಖ್ಯ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post